ETV Bharat / state

ಕೋಲಾರದಲ್ಲಿ ಶಮನವಾಗದ ಕೈ ಮುಖಂಡರ ಭಿನ್ನಮತ - undefined

ಕೋಲಾರ ಕಾಂಗ್ರೆಸ್​ನಲ್ಲಿ ದೂರವಾಗದ ಆತಂಕ. ಹೊತ್ತಿ ಉರಿಯುತ್ತಿದೆ ಭಿನ್ನಮತ. ಕಾಂಗ್ರೆಸ್​ ಅಭ್ಯರ್ಥಿ ಕೆ.ಹೆಚ್.​ ಮುನಿಯಪ್ಪಗಿಲ್ಲ ಪಕ್ಷದ ನಾಯಕರ ಬೆಂಬಲ.

ಕೋಲಾರ ಕಾಂಗ್ರೆಸ್​ನಲ್ಲಿ ಭಿನ್ನಮತ
author img

By

Published : Mar 30, 2019, 7:18 PM IST

ಕೋಲಾರ:ಈ ಲೋಕಸಭಾ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. ಆದ್ರೆ ಈ ಬಾರಿ ಕಾಂಗ್ರೆಸ್​ನಲ್ಲಿ ಆರಂಭದಿಂದಲೂ ಅಪಸ್ವರ ಕೇಳಿಬರುತ್ತಿದ್ದು, ಬಂಡಾಯದ ಬಿಸಿ ತಾರಕಕ್ಕೇರಿದೆ. ನಾಮಪತ್ರ ಪ್ರಕ್ರಿಯೆ ಮುಗಿದರೂ ಹೊತ್ತಿ ಉರಿಯುತ್ತಿರುವ ಬೆಂಕಿ ಮಾತ್ರ ತಣ್ಣಗಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರು, ಒಂದು ಕಡೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ಹಾಗೂ ಇನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಹಾಗಾಗಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲಲು ಬೇಕಾದ ವಾತಾವರಣ ಇದೆ. ಹೀಗಿದ್ದರೂ ಕಾಂಗ್ರೆಸ್​ನಲ್ಲಿ ಆತಂಕ ಮಾತ್ರ ದೂರವಾಗಿಲ್ಲ. ಇದಕ್ಕೆ ಕಾರಣ ಪಕ್ಷದಲ್ಲಿನ ಸ್ವಪಕ್ಷೀಯರ ವಿರೋಧ, ಹಾಲಿ ಕಾಂಗ್ರೆಸ್​ ಅಭ್ಯರ್ಥಿ ವಿರೋಧಿ ಅಲೆ ಹಾಗೂ ಪಕ್ಷದಲ್ಲಿ ಹೊತ್ತಿ ಉರಿಯುತ್ತಿರುವ ಭಿನ್ನಮತ ಎನ್ನಲಾಗುತ್ತಿದೆ.

ಸದ್ಯ ಇದು ಕಾಂಗ್ರೆಸ್​ ಅಭ್ಯರ್ಥಿ ಕೆ.ಹೆಚ್.​ ಮುನಿಯಪ್ಪಗೆ ತಲೆನೋವಾಗಿ ಪರಿಣಮಿಸಿದೆ. ಏಳು ಬಾರಿ ಇಲ್ಲಿ ಸಂಸದರಾಗಿ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡದೆ, ಪಕ್ಷದ ಕೆಲವು ಮುಖಂಡರನ್ನೇ ತುಳಿದಿದ್ದಾರೆ ಎನ್ನುವ ಕಾರಣಕ್ಕೆ ನಾಮಪತ್ರ ಸಲ್ಲಿಸುವ ವೇಳೆಯಲ್ಲೂ ಮಾಲೂರು ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡರನ್ನು ಹೊರತುಪಡಿಸಿ ಯಾವೊಬ್ಬ ಶಾಸಕ ಜೊತೆಗಿರಲಿಲ್ಲ. ನಾವು ಎಲ್ಲರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ರೂ ಯಾರೊಬ್ಬರೂ ಸಂಪರ್ಕಕ್ಕೆ ಸಿಗಲಿಲ್ಲ. ಕಾಂಗ್ರೆಸ್​ನಂತಹ ದೊಡ್ಡ ಪಕ್ಷದಲ್ಲಿ ಭಿನ್ನಮತ ಸಾಮಾನ್ಯ. ಎಲ್ಲವೂ ಸರಿ ಹೋಗುತ್ತದೆ ಅಂತಾರೆ ಮುನಿಯಪ್ಪ.

ಕೋಲಾರ ಕಾಂಗ್ರೆಸ್​ನಲ್ಲಿ ಭಿನ್ನಮತ

ಆದ್ರೆ ಮುನಿಯಪ್ಪನವರೇ ಹೇಳುವಂತೆ ಟಿಕೆಟ್​ ಹಂಚಿಕೆ ಹಂತದಿಂದ ಹಿಡಿದು ನಾಮಪತ್ರ ಸಲ್ಲಿಸುವವರೆಗೂ ಶಾಸಕರುಗಳಾದ ರಮೇಶ್​ ಕುಮಾರ್​, ವಿ.ಮುನಿಯಪ್ಪ, ಎಸ್​.ಎನ್​.ನಾರಾಯಣಸ್ವಾಮಿ, ಶ್ರೀನಿವಾಸಗೌಡ, ಹೆಚ್​.ನಾಗೇಶ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್​ ಹಾಗೂ ಮಾಲೂರು ಮಂಜುನಾಥ್​ ಎಲ್ಲರೂ ಬಹಿರಂಗವಾಗಿಯೇ ಮುನಿಯಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ. ಅಲ್ಲದೆ ಗುಪ್ತ ಸಭೆಗಳನ್ನು ಕೂಡಾ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಚಂದ್ರಾರೆಡ್ಡಿ ಮಾತ್ರ ಅದು ಕೇವಲ ಟಿಕೆಟ್​ ಹಂಚಿಕೆ ಸಮಯದಲ್ಲಿ ಇತ್ತು. ಈಗ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಯಾರಾದರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳ್ತಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.