ETV Bharat / state

ಕೆಜಿಎಫ್​ನಲ್ಲಿ ಬಿಜೆಪಿಯ ಹೊಸ ಟಿಕೆಟ್​ ಆಕಾಂಕ್ಷಿ ಪರಿಚಯಿಸಿದ ಸಚಿವ ಮುನಿರತ್ನ! - kolara

ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲುನಾಯ್ಕರ್ ಬಿಜೆಪಿ ಪಕ್ಷದ ಟಿಕೆಟ್​ ಆಕಾಂಕ್ಷಿ ಎಂದು ಸಚಿವ ಮುನಿರತ್ನ ಪರಿಚಯಿಸಿದರು.

kolar-muniratna-introduced-by-bjps-new-aspirant-in-kgf
ಕೆಜಿಎಫ್​ನಲ್ಲಿ ಬಿಜೆಪಿಯ ಹೊಸ ಟಿಕೆಟ್​ ಆಕಾಂಕ್ಷಿಯನ್ನು ಪರಿಚಯಿಸಿದ ಸಚಿವ ಮುನಿರತ್ನ
author img

By

Published : Apr 5, 2023, 10:05 PM IST

ಕೆಜಿಎಫ್​ನಲ್ಲಿ ಬಿಜೆಪಿಯ ಹೊಸ ಟಿಕೆಟ್​ ಆಕಾಂಕ್ಷಿಯನ್ನು ಪರಿಚಯಿಸಿದ ಸಚಿವ ಮುನಿರತ್ನ

ಕೋಲಾರ: ಸಚಿವ ಮುನಿರತ್ನ ಅವರಿಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲುನಾಯ್ಕರ್ ಎಂಬವರನ್ನು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಎಂದು ಘೋಷಿಸಿ ಇಂದು ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೇ ಕೆಜಿಎಫ್ ಕ್ಷೇತ್ರದಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಮೋಹನ್ ಕೃಷ್ಣ ನಡುವೆ ಟಿಕೆಟ್ ಫೈಟ್ ಏರ್ಪಟ್ಟಿದ್ದು, ಈ ನಡುವೆ ಸಚಿವರ ನಡೆ ಅಚ್ಚರಿ ಮೂಡಿಸಿದೆ.

ಉಸ್ತುವಾರಿ ಸಚಿವ ಮುನಿರತ್ನ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲುನಾಯ್ಕರ್ ಅವರನ್ನು ಬಿಜೆಪಿ ಟಿಕೆಟ್​​ ಆಕಾಂಕ್ಷಿ ಎಂದು ಘೋಷಣೆ ಮಾಡಿ ಕೆಜಿಎಫ್‌ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ''ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವ ನಿಟ್ಟಿನಲ್ಲಿ ಹೊಸ ಆಕಾಂಕ್ಷಿ ಅಭ್ಯರ್ಥಿಯನ್ನು ಇಲ್ಲಿ ಪರಿಚಯ ಮಾಡಿದ್ದೇನೆ. ಇಲ್ಲಿರುವ ಗುಂಪುಗಾರಿಕೆ ನನಗೂ ಗೊತ್ತಿದೆ" ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವೇಲುನಾಯ್ಕರ್, ‘‘ಕಾಲೇಜಿನಲ್ಲಿರುವಾಗಲೇ ರಾಜಕೀಯ ಜೀವನ ಆರಂಭಿಸಿದ್ದ ನಾನು ನನ್ನ ಕೆಲಸ, ಶ್ರಮ ಗುರುತಿಸಿ ಸಚಿವ ಮುನಿರತ್ನ ಅವರು ಅವರ ಕ್ಷೇತ್ರದಲ್ಲಿ ಕಾರ್ಪೋರೇಶನ್​ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟರು. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿ ಪಕ್ಷದ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಕೋಲಾರದ ಕೆಜಿಎಫ್ ಕ್ಷೇತ್ರಕ್ಕೂ ನನಗೂ ಹಳೆಯ ಸಂಬಂಧ ಇದೆ, ಬಿಜೆಪಿ ಪಕ್ಷ ಕಾರ್ಯಕರ್ತರನ್ನು ಗುರುತಿಸುವ ಪಕ್ಷ, ಮುಖಂಡರು ಸೂಚನೆಯಂತೆ ನಾನು ಸಹ ಕೆಜಿಎಫ್​ನಲ್ಲಿ ಆಕಾಂಕ್ಷಿಯಾಗಿದ್ದು, ಅಭ್ಯರ್ಥಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಟಿಕೆಟ್​ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಮಾಡಾಳ್ ಪುತ್ರ ಮಲ್ಲಿಕಾರ್ಜುನ ಕಣಕ್ಕೆ?

ಏ. 8 ರಂದು ಬಿಜೆಪಿ ಮೊದಲ ಪಟ್ಟಿ?: ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿವೆ. ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ಆಯಾ ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಕೋರ್ ಕಮಿಟಿಗಳಿಂದ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಏಪ್ರಿಲ್ 4 ಮತ್ತು 5 ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಪಕ್ಷದ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದರು.

ಏ 8 ರಂದು ನವದೆಹಲಿಯಲ್ಲಿ ಪಕ್ಷದ ಅತ್ಯುನ್ನತ ಸಮಿತಿಯಾದ ಕೇಂದ್ರ ಸಂಸದೀಯ ಮಂಡಲಿ ಮತ್ತು ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಪರಿಶೀಲನೆ ನಡೆಸಲಾಗುತ್ತದೆ. ಮೂರು ಹಂತದಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, 8 ರಂದು ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ನಟ ಸುದೀಪ್‌ ಬೆಂಬಲ: ಕೇಸರಿ ಪಕ್ಷದ ಲೆಕ್ಕಾಚಾರವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.