ಕೋಲಾರ: ಫೋನ್ ಪೇ, ಗೂಗಲ್ ಪೇ ರೀತಿಯಲ್ಲಿ ಭಾರತ್ ಪೇ ಅನ್ನೋ ಮೊಬೈಲ್ ಆ್ಯಪ್ ಹಾಕಿಕೊಡುವ ನೆಪದಲ್ಲಿ ಬಾಂಗ್ಲಾ ಗ್ಯಾಂಗ್, ಅಂಗಡಿ ಮಾಲೀಕರಿಗೆ ದೋಖಾ ಮಾಡಿರುವ ಘಟನೆ ಕೋಲಾರ ನಗರದಲ್ಲಿ ನಡೆದಿದೆ. ಕೋಲಾರ ನಗರದ ಅಂಗಡಿಗಳಲ್ಲಿ ಬಾಂಗ್ಲಾ ಗ್ಯಾಂಗ್ಗಳ ಕೈಚಳಕ ಇತ್ತೀಚೆಗೆ ಹೆಚ್ಚಾಗಿದೆ. ರಥನ್ ಲೋಕ್ ಸ್ಟೀಲ್ಸ್, ಎಸ್.ಎಲ್.ವಿ ಸೂಪರ್ ಮಾರ್ಕೆಟ್, ಮೀನಾ ಕಂಪ್ಯೂಟರ್ಸ್ ಅಂಗಡಿಗಳು ಸೇರಿದಂತೆ ಕೋಲಾರ ನಗರದ ಹಲವು ಅಂಗಡಿಗಳಲ್ಲಿ ಬಾಂಗ್ಲಾ ಗ್ಯಾಂಗ್ ಮೋಸ ಮಾಡಿದೆ.
ಮೊಬೈಲ್ ಆ್ಯಪ್ ಇನ್ಸ್ಟಾಲ್ ಮಾಡಿಕೊಡುವ ನೆಪದಲ್ಲಿ ಬೆಲೆಬಾಳುವ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಅಲ್ಲದೇ ಆ್ಯಪ್ ಹಾಕಿಕೊಡುವ ನೆಪದಲ್ಲಿ ಮೊಬೈಲ್ನಲ್ಲಿನ ಹಣವನ್ನ ಸಹ ಖಾಲಿ ಮಾಡಿದ್ದಾರೆ. ಮೊಬೈಲ್ ಕಸಿದುಕೊಂಡು ಹೋಗುವ ದೃಶ್ಯಗಳು ಕೆಲ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಗು ಸಮೇತ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ.. ನಂಜನಗೂಡಲ್ಲಿ ದುರಂತ