ಕೋಲಾರ: ಜಿಲ್ಲೆಯ ಮಾರ್ಕಂಡೇಯ ಡ್ಯಾಂ ತುಂಬಿ ಹರಿಯುತ್ತಿರುವ ಹಿನ್ನೆಲೆ ಆ ಭಾಗದ ಕೆಲ ಗ್ರಾಮದ ರಸ್ತೆಗಳನ್ನ ಗ್ರಾಮಸ್ಥರು ಬಂದ್ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಹಾಗೂ ಮಾಲೂರು ಭಾಗದಲ್ಲಿನ ಬೂದಿಕೋಟೆ, ದೇವರಹಳ್ಳಿ ಸೇರಿದಂತೆ ಮಾಸ್ತಿ ಗ್ರಾಮಗಳ ರಸ್ತೆಗಳನ್ನ ಗ್ರಾಮಸ್ಥರು ಬಂದ್ ಮಾಡಿದ್ದಾರೆ.
ಮಾರ್ಕಂಡೇಯ ಡ್ಯಾಂ ತುಂಬಿ ಹರಿಯುತ್ತಿರುವ ಹಿನ್ನೆಲೆ ಹಾಗೂ ಮಳೆಯ ಆರ್ಭಟಕ್ಕೆ ಡ್ಯಾಂ ನ ಅಕ್ಕಪಕ್ಕದ ಗ್ರಾಮದ ರಸ್ತೆಗಳಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ರಸ್ತೆಯಲ್ಲಿ ವಾಹನ ಸವಾರರು, ಜನರು ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಗ್ರಾಮಸ್ಥರು ರಸ್ತೆಗಳನ್ನ ಬಂದ್ ಮಾಡಿದ್ದಾರೆ. ಇನ್ನೂ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಕೆಲ ವಾಹನ ಸವಾರರು ಓಡಾಡುತ್ತಿದ್ದು, ಅವರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ನಿರಂತ ಮಳೆಯಿಂದ ಯರಗೋಳ್ ಡ್ಯಾಂ ತುಂಬಿ ಹರಿಯುತ್ತಿದೆ. ಇತ್ತೀಚೆಗಷ್ಟೆ ಡ್ಯಾಂ ನಿರ್ಮಾಣದ ಕಾಮಗಾರಿ ಮುಗಿದಿದ್ದು, ಡ್ಯಾಂ ನಿರ್ಮಾಣವಾದ ನಂತರ ಇದೇ ಮೊದಲ ಬಾರಿಗೆ ತುಂಬಿ ಹರಿಯುತ್ತಿದೆ.
ಇದನ್ನೂ ಓದಿ: ಪುಣ್ಯಸ್ನಾನದ ವೇಳೆ ಕೊಚ್ಚಿಹೋದ ಸಹೋದರಿಯರು: ತಂಗಿ ಶವ ಪತ್ತೆ, ಅಕ್ಕನಿಗಾಗಿ ಶೋಧ ಕಾರ್ಯ