ಕೋಲಾರ: ನಾನು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ, ನನ್ನ ಪ್ರಾಣ ಹೋದರೂ ಕೊನೆ ಕ್ಷಣದವರೆಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹೋರಾಟ ಮಾಡುತ್ತೇನೆ, ಎಂದು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರು ಹೇಳಿಕೆ ನೀಡಿದರು.
ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ಕೋಲಾರ ಲೋಕಸಭಾ ಕ್ಷೇತದಲ್ಲಿ ಇತಿಹಾಸ ಸೃಷ್ಟಿಯಾಗಲಿದ್ದು, ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಪಲಾಯನವಾಗುವ ಪ್ರಶ್ನೆಯೇ ಇಲ್ಲ ಎಂದರು.
ನನ್ನ ಮೇಲೆ ಯಾವುದೇ ಕೇಸ್ಗಳು ಇಲ್ಲ, ಜೊತೆಗೆ ನಾನು ರೌಡಿ ಶೀಟರ್ ಸಹ ಅಲ್ಲ, ಇದೆಲ್ಲಾ ನನ್ನ ವಿರುದ್ದ ಸುಳ್ಳು ವದಂತಿಗಳನ್ನ ಹಬ್ಬಿಸುತ್ತಿದ್ದಾರೆಂದು ತಿಳಿಸಿದ್ರು.
ಇನ್ನು ಬಂಡಾಯ ಅಭ್ಯರ್ಥಿ ಡಿ.ಎಸ್.ವೀರಯ್ಯ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ, ಎಲ್ಲಾ ನಾಯಕರು ಒಟ್ಟಿಗೆ ಇದ್ದೇವೆ, ನಮ್ಮ ಪಕ್ಷದಲ್ಲಿ ಯಾವುದೆ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ನಾಮಪತ್ರ ಸಲ್ಲಿಕೆಗೂ ಮೊದಲು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿಗೆ ಪೂಜೆ ಸಲ್ಲಿಸಿ, ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮುಖಂಡರೊಂದಿಗೆ ಕುಟುಂಬ ಸಮೇತರಾಗಿ ನಾಮಪತ್ರ ಸಲ್ಲಿಸಿದರು.