ಕೋಲಾರ: ವೈಯಕ್ತಿಕ ಕಾರಣಗಳಿಂದ ಸರ್ಕಾರ ಹಾಗೂ ಪಕ್ಷವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅತೃಪ್ತ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ಕುರಿತು ಮಾತನಾಡಿರುವ ಅವರು, ಕುಮಾರಸ್ವಾಮಿ ಒಳ್ಳೆಯ ಸಿಎಂ, ಉತ್ತಮ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೇ ಸಿದ್ದರಾಮಯ್ಯ. ನನ್ನ ಕ್ಷೇತ್ರದಲ್ಲಿ ಸರ್ಕಾರದಿಂದ ಯಾವುದೇ ತೊಂದರೆಗಳು ಆಗಿಲ್ಲ, ಒಳ್ಳೆಯ ಕೆಲಸ ನಡೆಯುತ್ತಿವೆ ಎಂದಿದ್ದಾರೆ.
ಹಾಗೇ, ನಾನು ಸರ್ಕಾರದ ಕುರಿತು ಯಾವುದೇ ಅತೃಪ್ತಿಯನ್ನು ಹೊಂದಿಲ್ಲ. ನಾನು ಪಕ್ಷಕ್ಕೆ ನಿಷ್ಠೆಯಿಂದಿದ್ದು, ಮತ್ತೆ ಚುನಾವಣೆ ಬರಲು ಕಾರಣವಾಗುವುದಿಲ್ಲ. ಯಾರಿಂದಲೋ ಚುನಾವಣೆ ಬಂದ್ರೆ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.