ಕೋಲಾರ: ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ದಾಂಗುಡಿ ಇಟ್ಟಿದ್ದ ಉಗ್ರ ಮಿಡತೆಗಳ ಹಿಂಡು ಕೋಲಾರ ಜಿಲ್ಲೆಯ ದಿಂಬ ಹಾಗೂ ದೊಡ್ಡಹಸಾಳ ಬಳಿ ಕಾಣಿಸಿಕೊಂಡಿದೆ.
ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಗ್ರಾಮಗಲ ಬಳಿ ಮಿಡತೆಗಳ ಗುಂಪು ಕಾಣಿಸಿಕೊಳ್ಳುವ ಮೂಲಕ ಆತಂಕಕ್ಕೀಡು ಮಾಡಿವೆ. ಆತಂಕಕ್ಕೆ ಒಳಗಾದ ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮಿಡತೆಗಳನ್ನು ಸುಟ್ಟು ಹಾಕಿದ್ದಾರೆ.
ಗ್ರಾಮದ ತೋಟಗಳು, ರಸ್ತೆ ಬದಿಯ ಗಿಡಗಳು ಸೇರಿದಂತೆ ವಿದ್ಯುತ್ ಕಂಬಗಳ ಮೇಲೆ ಗುಂಪು ಗುಂಪಾಗಿ ಮಿಡತೆಗಳು ಕಾಣಿಸಿಕೊಂಡಿವೆ. ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ.