ETV Bharat / state

ಕೋಲಾರ ರೈತನ ದ್ರಾಕ್ಷಿ ಬೆಳೆಗೆ ಹೊಡೆತ ಕೊಟ್ಟ ಕೋವಿಡ್‌-19

ಕೋಲಾರ ಜಿಲ್ಲೆಯ ಕೆಜಿಎಫ್ ಸಮೀಪದ ಕೊತ್ತೂರು ಗ್ರಾಮದಲ್ಲಿನ ರೈತನೋರ್ವ ಸಮೃದ್ಧವಾಗಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಆದರೆ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಸಿಗದೆ ಕಂಗಾಲಾಗಿದ್ದಾರೆ.

Grape farmers facing market problem at Kolar
ಕಷ್ಟಪಟ್ಟು ಬೆಳೆದಿದ್ದ ದ್ರಾಕ್ಷಿಗೆ ಹುಳಿಯಾದ ಕೋವಿಡ್‌-19
author img

By

Published : May 24, 2020, 5:53 PM IST

ಕೋಲಾರ: ಜಿಲ್ಲೆಯಲ್ಲಿ ಅಂತರ್ಜಲ‌ಮಟ್ಟ ಪಾತಾಳಕ್ಕೆ ಕುಸಿದಿದ್ದು, ಅಲ್ಪಸ್ವಲ್ಪ ಬರುವ ನೀರಿನಲ್ಲಿ ದ್ರಾಕ್ಷಿ ಬೆಳೆದಿರುವ ರೈತನ ಆದಾಯದ ಕನಸಿಗೆ ಕೊರೊನಾ ತಣ್ಣೀರೆರಚಿದೆ. ಇದರಿಂದ ರೈತ ಕಂಗಾಲಾಗಿದ್ದು, ಮುಂದೇನು ಎನ್ನುವ ಚಿಂತೆಯಲ್ಲಿದ್ದಾನೆ.

ಕಂಗಾಲಾಗಿರುವ ರೈತ ಕುಟುಂಬ

ಕೋಲಾರ ಜಿಲ್ಲೆಯ ಕೆಜಿಎಫ್ ಸಮೀಪದ ಕೊತ್ತೂರು ಗ್ರಾಮದಲ್ಲಿನ ರೈತ ಮುನಿವೆಂಕಟಪ್ಪ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಸಾಲಸೋಲ ಮಾಡಿ ಕುಟುಂಬ ಹಗಳಿರುಳೆನ್ನದೆ ದುಡಿದರ ಪರಿಣಾಮ ಉತ್ತಮ ಫಸಲು ಬಂದಿದೆ. ಆದರೆ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದರೂ ಕೋವಿಡ್‌-19ನಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೆ ತೋಟದಲ್ಲೇ ಕೊಳೆಯುವಂತಾಗಿದೆ. ಪರಿಣಾಮ ರೈತ ಮುನಿವೆಂಕಟಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.

Grape farmers facing market problem at Kolar
ಕಂಗಾಲಾಗಿರುವ ರೈತ ಕುಟುಂಬ

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಸಾವಿರಾರು ಅಡಿಗಳಿಂದ ನೀರು ತೆಗೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ‌ ಮಧ್ಯೆ ದ್ರಾಕ್ಷಿ ಬೆಳೆದಿರುವ ರೈತ, ತಮ್ಮ ಜಮೀನಿನಲ್ಲಿ ಐದರಿಂದ ಆರು ಬೋರ್​ವೆಲ್​ಗಳನ್ನ ಕೊರೆಸಿ, ಕೈಸುಟ್ಟುಕೊಂಡಿದ್ದಾರೆ. ಹೀಗಿರುವಾಗ ಕಳೆದ ಆರು ತಿಂಗಳ‌ ಹಿಂದೆ ಮತ್ತೊಂದು ಬೋರ್​​ವೆಲ್ ಕೊರೆಸಿ, ಕೃಷಿ ಹೊಂಡ ನೆರವಿನಿಂದ ದ್ರಾಕ್ಷಿ ಬೆಳೆದಿದ್ದಾರೆ. ಆದರೀಗ ಇವರ ಆದಾಯದ ಕನಸು ನುಚ್ಚುನೂರಾಗಿದೆ.

ಈ ಕುರಿತಂತೆ ಸರ್ಕಾರ ನಮ್ಮಂತ ರೈತರ ಸಮಸ್ಯೆ ಆಲಿಸಿ ಬೆಳೆ ಪರಿಹಾರ ನೀಡಬೇಕೆಂಬುದು ರೈತ ಮುನಿವೆಂಕಟಪ್ಪ ಕುಟುಂಬದ ಒತ್ತಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.