ಕೋಲಾರ: ಜಿಲ್ಲೆಯ ಕೆಜಿಎಫ್ ನಗರದ ಪಾರ್ಕ್‌ನಲ್ಲಿರುವ ಡಾ ಬಿ.ಆರ್. ಅಂಬೇಡ್ಕರ್ ಭವನ, ಅಂಬೇಡ್ಕರ್ ಪ್ರತಿಮೆ ಹಾಗೂ ಮಾಜಿ ಶಾಸಕ ಸಿ.ಎಂ.ಆರ್ಮುಗಂ ಅವರ ಪ್ರತಿಮೆ ಮತ್ತು ಸಮಾಧಿ ತೆರವು ಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆ ಇಂದು ಪ್ರಗತಿಪರ ಸಂಘಟನೆಗಳಿಂದ ಕೆಜಿಎಫ್ ಬಂದ್‌ಗೆ ಕರೆ ಕೊಡಲಾಗಿದ್ದು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂಬೇಡ್ಕರ್ ಪಾರ್ಕ್‌ನಲ್ಲಿರುವ ಅಂಬೇಡ್ಕರ್ ಭವನ ತೆರವು ಮಾಡುವಂತೆ ಇತ್ತೀಚೆಗೆ ನಗರಸಭೆ ಮಾಜಿ ಸದಸ್ಯರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಹೈಕೋರ್ಟ್ ಅಂಬೇಡ್ಕರ್ ಪಾರ್ಕ್ನಲ್ಲಿ ನಿರ್ಮಾಣವಾಗಿರುವ ಭವನ ಹಾಗೂ ಪ್ರತಿಮೆ ಹಾಗೂ ಸಮಾಧಿ ತೆರವು ಮಾಡುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಕೆಜಿಎಫ್ ಬಂದ್‌ಗೆ ಕರೆ ನೀಡಲಾಗಿತ್ತು. ಅದರಂತೆ ಇಂದು ವಿವಿಧ ಸಂಘಟನೆಗಳ ಮುಖಂಡರು ರಸ್ತೆಗಿಳಿದು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ವಿವಿಧ ಕನ್ನಡಪರ, ರೈತಪರ ಸೇರಿದಂತೆ ಸಿಪಿಎಂ, ಜೆಡಿಎಸ್ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಇನ್ನು ಕೆಜಿಎಫ್ ನಗರದೆಲ್ಲೆಡೆ ಅಂಗಡಿ ಮುಂಗಟ್ಟು, ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಆಟೋ ಸಂಘಟನೆಗಳು ಸೇರಿದಂತೆ ಪ್ರತಿಷ್ಠಿತ ಬೆಮೆಲ್ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಖಾನೆ ಸಿಬ್ಬಂದಿಗಳಿಗೆ ರಜೆ ನೀಡಿ ಬಂದ್‌ಗೆ ಬೆಂಬಲ ಸೂಚಿಸಿತ್ತು. ಇನ್ನೂ ಮುನ್ನಚ್ಚರಿಕಾ ಕ್ರಮವಾಗಿ ಕೆಜಿಎಫ್ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ ಬ್ರ್ಯಾಂಡ್ ಬೆಂಗಳೂರು ನಾಶ: ಸಂಸದ ತೇಜಸ್ವಿ ಸೂರ್ಯ ಆಕ್ರೋಶ