ETV Bharat / state

ಬಟ್ಟೆ, ಚಾಕೊಲೇಟ್​ ಕೊಡಿಸದ್ದಕ್ಕೆ ಮನೆ ಬಿಟ್ಟು ಬಂದ ಬಾಲಕಿ.. ಹುಟ್ಟುಹಬ್ಬದ ದಿನವೇ ಅಪ್ರಾಪ್ತೆ ಮೇಲೆ ಗ್ಯಾಂಗ್​ ರೇಪ್​ - ಹುಟ್ಟುಹಬ್ಬದಂದೇ ಬಾಲಕಿ ಮೇಲೆ ಅತ್ಯಾಚಾರ

14 ವರ್ಷದ ಬಾಲಕಿಯೊಬ್ಬಳ ಮೇಲೆ ಹುಟ್ಟುಹಬ್ಬದ ದಿನವೇ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

Fourteen year-old runaway girl gang raped on her birthday in kolar
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Feb 20, 2022, 8:09 PM IST

Updated : Feb 20, 2022, 9:00 PM IST

ಕೋಲಾರ: 14 ವರ್ಷದ ಬಾಲಕಿಯೊಬ್ಬಳ ಮೇಲೆ ಹುಟ್ಟುಹಬ್ಬದ ದಿನವೇ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಆರೋಪಿಗಳನ್ನು ಆನಂದ್ ಕುಮಾರ್, ಕಾಂತರಾಜು, ಪ್ರವೀಣ್ ಮತ್ತು ವೇಣು ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರು ಮೇಸ್ತ್ರಿಗಳು ಮತ್ತು ಓರ್ವ ಬಸ್ ಚಾಲಕನಾಗಿದ್ದಾನೆ.

Fourteen year-old runaway girl gang raped on her birthday in kolar
ಬಂಧಿತ ಆರೋಪಿಗಳು

9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯು ಪೋಷಕರು ತನಗೆ ಹೊಸ ಬಟ್ಟೆ ಮತ್ತು ಚಾಕೊಲೇಟ್‌ ಕೊಡಿಸಲಿಲ್ಲ ಎಂಬ ಕೋಪಕ್ಕೆ ಶಾಲೆಗೆ ಹೋಗದೆ ಶುಕ್ರವಾರ ಬಂಗಾರಪೇಟೆ ಬಸ್ ಏರಿದ್ದಳು. ಆಕೆಯನ್ನು ಏಕಾಂಗಿಯಾಗಿ ಕಂಡ ದುರುಳರು ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡಿ ಉದ್ಯಾನವನಕ್ಕೆ ಕರೆದೊಯ್ದು ಸಂಜೆಯವರೆಗೂ ಕಾಲ ಕಳೆದಿದ್ದಾರೆ. ಬಳಿಕ ತಡರಾತ್ರಿ ಆರೋಪಿಗಳು ಆಕೆಯನ್ನು ಖಾಸಗಿ ಬಸ್‌ನಲ್ಲಿ ತಣಿಮಡಗು ಗ್ರಾಮಕ್ಕೆ ಕರೆದೊಯ್ದಿದ್ದಾರೆ. ದಾರಿಯಲ್ಲಿ ಆರೋಪಿಗಳು ಮದ್ಯ ಸೇವಿಸಿ ಪ್ರತ್ಯೇಕ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಇದನ್ನೂ ಓದಿ: ಮನೆಯೊಳಗೆ ಒಂದೇ ಕುಟುಂಬದ ನಾಲ್ವರ ಮೃತದೇಹ ಪತ್ತೆ.. ಆತ್ಮಹತ್ಯೆ ಶಂಕೆ

ಬಾಲಕಿಯ ಕಿರುಚಾಟ ಕೇಳಿದ ಗ್ರಾಮಸ್ಥರು ಕಾಮಸಮುದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಲಕಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Feb 20, 2022, 9:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.