ETV Bharat / state

ದೇಶಸೇವೆ ಮಾಡಿ ಬದುಕಿಬಂದೆ, ಈ ___ಗಳ ಹತ್ತಿರ ಬಚಾವ್​ ಆಗ್ಲಿಲ್ಲ... ಲಂಚ ಕೇಳಿದ ಎಫ್​ಡಿಎಗೆ ಮಾಜಿ ಯೋಧ ತರಾಟೆ

ಕೊಲಾರ ತಾಲೂಕು ಕಚೇರಿಯ ಎಫ್​ಡಿಎ ಅಧಿಕಾರಿಯೊಬ್ಬರಿಗೆ ಮಾಜಿ ಯೋಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಡತ ವಿಲೇವಾರಿ ಮಾಡಿಕೊಡಲು ಸತಾಯಿಸುತ್ತಿದ್ದ ಅಧಿಕಾರಿ ವಿರುದ್ದ ಆಕ್ರೋಶ ಹೊರ ಹಾಕಿದ ಮಾಜಿ ಯೋಧ.

Former Solder
ಎಫ್​ಡಿಎ ಅಧಿಕಾರಿ ವಿರುದ್ದ ಮಾಜಿ ಯೋಧನ ಆಕ್ರೋಶ
author img

By

Published : Mar 20, 2020, 2:16 PM IST

ಕೋಲಾರ :​ ಲಂಚ ಕೇಳಿದ ಎಫ್​ಡಿಎ ಅಧಿಕಾರಿಯೊಬ್ಬನಿಗೆ ಮಾಜಿ ಯೋಧನೊಬ್ಬ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕು ಕಚೇರಿಯಲ್ಲಿ ನಡೆದಿದೆ.

ಮಾಲೂರು ತಾಲೂಕು ಮಣಿಶೆಟ್ಟಿಹಳ್ಳಿ ಗ್ರಾಮದ ಮಾಜಿ ಯೋಧ ವೆಂಕಟೇಶಪ್ಪ ಎಂಬುವವರ ಜಮೀನಿನ ಕಡತ ವಿಲೇವಾರಿಗೆಂದು ಕಳೆದ ಹತ್ತು ವರ್ಷಗಳಿಂದ ತಿರುಗುತ್ತಿದ್ದಾರೆ, ಹೀಗಿದ್ದರೂ ಕೂಡ ಎಫ್​ಡಿಎ ಅಧಿಕಾರಿ ಹರಿಪ್ರಸಾದ್​ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದು ಕೆಲಸ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಎಫ್​ಡಿಎ ಅಧಿಕಾರಿ ವಿರುದ್ದ ಮಾಜಿ ಯೋಧನ ಆಕ್ರೋಶ

ಹಣ ಕೊಡದ ಹಿನ್ನೆಲೆ ಕೆಲಸ ಮಾಡಿಕೊಡದೆ ಇಂದು ನಾಳೆ ಎಂದು ಸತಾಯಿಸುತ್ತಿದ್ದ ಹರಿಪ್ರಸಾದ್​ ಎಂಬುವನಿಗೆ ಕಚೇರಿಯಲ್ಲೇ ಮಾಜಿ ಯೋಧ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ನೀನು ಲಂಚ ಕೇಳೋದಾದ್ರೆ ನಮ್ಮ ಮನೆಗೆ ಕಳಿಸು ಅವರನ್ನು ಕೂಲಿ ಮಾಡಿ ಬೇಕಾದ್ರೆ ಸಾಕುತ್ತೇನೆ, ನಾನೇನು ನಿಮ್ಮ ಮನೆ ಆಳಲ್ಲ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾನೆ.

ಇದರಿಂದ ಅವಮಾನಕ್ಕೊಳಗಾದ ತಾಲೂಕು ಕಚೇರಿ ಸಿಬ್ಬಂದಿ ಮಾಜಿ ಯೋಧನನ್ನು ಸಮಾಧಾನ ಪಡಿಸಿ ಬಾಕಿ ಕೆಲಸ ಮಾಡಿ ಕೊಡುವುದಾಗಿ ತಿಳಿಸಿ ಸಮಾಧಾನ ಪಡಿಸಿ, ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.