ETV Bharat / state

ಒಂದೇ ಬೈಕ್‌ನಲ್ಲಿ ಕೋವಿಡ್ ಕೇಂದ್ರಕ್ಕೆ ತೆರಳಿದ ಕುಟುಂಬದ ಐವರು ಸದಸ್ಯರು

ಆ್ಯಂಬುಲೆನ್ಸ್​ನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಮುಜುಗರವಾದ ಕಾರಣ ಕುಟುಂಬದ ಐವರು ಸದಸ್ಯರು ಒಂದೇ ಬೈಕ್‍ನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ ಫೋಟೋ ವೈರಲ್ ಆಗಿದೆ,

Kolar
ಒಂದೇ ಬೈಕಿನಲ್ಲಿ ಕೋವಿಡ್ ಕೇಂದ್ರಕ್ಕೆ ತೆರಳಿದ ಐವರು
author img

By

Published : May 4, 2021, 8:19 AM IST

ಕೋಲಾರ: ಆ್ಯಂಬುಲೆನ್ಸ್​ನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವುದಕ್ಕೆ ಮುಜುಗರವಾದ ಕಾರಣ ಒಂದೇ ಬೈಕ್‍ನಲ್ಲಿ ಐವರು ಕ್ವಾರಂಟೈನ್ ಕೇಂದ್ರಕ್ಕೆ ಪ್ರಯಾಣ ಬೆಳೆಸಿರುವ ಫೋಟೋ ವೈರಲ್​ ಆಗಿದೆ.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬುರಕಾಯಲಕೋಟೆ ಗ್ರಾಮದಲ್ಲಿ ಈ ಘಟ‌ನೆ ಜರುಗಿದೆ. ಪತಿ, ಪತ್ನಿ ಹಾಗೂ ಮೂವರು ಮಕ್ಕಳು ಚಲ್ದಿಗಾನಹಳ್ಳಿ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಲಕ್ಷ್ಮೀಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದ ಕುಟುಂಬಸ್ಥರಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಆ್ಯಂಬುಲೆನ್ಸ್​ನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವುದಕ್ಕೆ ಮುಜುಗರವಾಗುತ್ತದೆ ಎಂದು ಬೈಕ್​ನಲ್ಲೇ ತೆರಳಿದ್ದಾರೆ.

Kolar
ಬುರಕಾಯಲಕೋಟೆ ಗ್ರಾಮ ಸೀಲ್‍ಡೌನ್

ಬುರಕಾಯಲಕೋಟೆ ಗ್ರಾಮದಲ್ಲಿ ಒಟ್ಟು 12 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಗ್ರಾಮವನ್ನು ಪಂಚಾಯಿತಿ ಅಧಿಕಾರಿಗಳು ಸೀಲ್‍ಡೌನ್ ಮಾಡಿದ್ದಾರೆ.

ಇದನ್ನೂ ಓದಿ: 'ರಿಸೈನ್ ಸುಧಾಕರ್' ಕಾಂಗ್ರೆಸ್ ಅಭಿಯಾನ: 11 ಲಕ್ಷ ಮಂದಿ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.