ಕೋಲಾರ: ಜಿಲ್ಲೆಯ ಮುಳಬಾಗಿಲು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಐದು ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಇದರಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದು, ಗ್ರಾಮಸ್ಥರೆಲ್ಲ ನಿರ್ಧರಿಸಿ ಸ್ವಯಂ ದಿಗ್ಭಂಧನ ಹಾಕಿಕೊಂಡಿದ್ದಾರೆ.
ಗ್ರಾಮದಿಂದ ಯಾರೂ ಹೊರ ಹೋಗಬಾರದು ಜೊತೆಗೆ ನಮ್ಮ ಗ್ರಾಮಗಳಿಗೂ ಯಾರೂ ಬರಬಾರದು ಎಂದು ತೀರ್ಮಾನಿಸಿದ್ದಾರೆ. ಸುಮಾರು 6 ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವೇಶ ನಿರ್ಬಂಧ ಮಾಡಿರುವ ಗ್ರಾಮಸ್ಥರು, ಹಳ್ಳಿಯ ಮುಖ್ಯ ರಸ್ತೆಗಳಿಗೆ ಕಲ್ಲು ಬಂಡೆಗಳನ್ನು ಹಾಕುವುದರ ಮೂಲಕ ಪ್ರವೇಶ ನಿರಾಕರಿಸಿದ್ದಾರೆ.
ಅಲ್ಲದೇ, ಸೋಂಕು ಪತ್ತೆಯಾದ ಹಿನ್ನೆಲೆ ಮುಳಬಾಗಿಲು ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಪಟ್ಟಣದ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದು, ಔಷಧ ಮತ್ತು ದಿನಸಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಇಡೀ ಮುಳಬಾಗಿಲು ಪಟ್ಟಣ ಸ್ತಬ್ಧಗೊಂಡಿದೆ.