ETV Bharat / state

ಕೆರೆ ಒತ್ತುವರಿ ತೆರವುಗೊಳಿಸಲು ಪ್ರತಿಭಟನೆ: ರೈತರು ಹಾಗೂ ಒತ್ತುವರಿದಾರರ ನಡುವೆ ಗಲಾಟೆ - ಕೋಲಾರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

Farmers protest
ರೈತರು ಹಾಗೂ ಒತ್ತುವರಿದಾರರ ನಡುವೆ ಗಲಾಟೆ
author img

By

Published : Jan 21, 2020, 5:09 PM IST

ಕೋಲಾರ: ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕೋಲಾರ ತಾಲೂಕಿನ ಶಿಳ್ಳಂಗೆರೆ ಕೆರೆ ಒತ್ತುವರಿಯಾಗಿದೆ ಎಂದು ಆರೋಪಿಸಿ, ಎಮ್ಮೆ ಹಾಗೂ ಕುರಿಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಿಲ್ಲಿಸಿ ಪ್ರತಿಭಟನೆ ನಡೆಸಿದ ರೈತರು, ಒತ್ತುವರಿ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ರು.

ರೈತರು ಹಾಗೂ ಒತ್ತುವರಿದಾರರ ನಡುವೆ ಗಲಾಟೆ

ಇನ್ನು ಪ್ರತಿಭಟನೆ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಒತ್ತುವರಿದಾದರರು ಹಾಗೂ ರೈತರ ನಡುವೆ ಗಲಾಟೆ ಉಂಟಾಯಿತು. ರೈತ ಮಹಿಳೆ ಲಕ್ಷ್ಮಮ್ಮ ಹಾಗೂ ಒತ್ತುವರಿದಾರ ಶಿವಣ್ಣ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಕೆರೆ ಒತ್ತುವರಿ ಜಾಗದ ಸುತ್ತಮುತ್ತ ಔಷಧಿ ಸಿಂಪಡಿಸಿದ ಕಳೆಯನ್ನು ತಿಂದು ಗ್ರಾಮದಲ್ಲಿ, ಮೂರು ತಿಂಗಳಿಂದ ಸುಮಾರು 60 ಕ್ಕೂ ಹೆಚ್ಚು ಕುರಿ, ಮೇಕೆ, ಎಮ್ಮೆ ಹಾಗೂ ಹಸಗಳು ಸರಣಿ ಸಾವನ್ನಪ್ಪಿವೆ ಎಂದು ರೈತರು ಆರೋಪಿಸಿದರು.

ಇನ್ನು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಬಂದು, ಮನವಿ ಸ್ವೀಕರಿಸಿ ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ರು. ಇನ್ನು ಇದೆ ವೇಳೆ ಒತ್ತುವರಿದಾರರ ಮೇಲೆ ಕಾನೂನು ರೀತಿಯ ಕ್ರಮ ವಹಿಸಬೇಕೆಂದು ರೈತರು ಒತ್ತಾಯ ಮಾಡಿದ್ರು.

Intro:ಆಂಕರ್ : ಕೋಲಾರ ಜಿಲ್ಲಾಧಿಕಾರಿ ಮಂಜುನಾಥ್ ಮುಂದೆಯೇ ಕೆರೆ ಒತ್ತುವರಿದಾರರು ಹಾಗೂ ರೈತ ಮಹಿಳೆ ನಡುವೆ ಗಲಾಟೆ ನಡೆದ ಪ್ರಸಂಗ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದೆ..

Body:ಕೋಲಾರ ತಾಲೂಕಿನ ಶಿಳ್ಳಂಗೆರೆ ಮೂಲದ ರೈತ ಮಹಿಳೆ ಲಕ್ಷ್ಮಮ್ಮ ಹಾಗೂ ಒತ್ತುವರಿದಾರ ಶಿವಣ್ಣ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆಯಿತು. ಕೆರೆ ಒತ್ತುವರಿ ಜಾಗದ ಸುತ್ತಮುತ್ತ ಅಪಾಯಕಾರಿ ಔಷಧಿ ಸಿಂಪಡಿಸಿರುವ ಆರೋಪ ಹಿನ್ನೆಲೆ ಒತ್ತುವರಿದಾರರ ವಿರುದ್ದ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ಆಗಮಿಸಿದ್ದ ರೈತ ಮಹಿಳೆ ಲಕ್ಷ್ಮಮ್ಮ, ಶಿವಣ್ಣ ಜೊತೆಗ ವಾಗ್ವಾದ ನಡೆದಿದೆ. ಮೂರು ತಿಂಗಳಿಂದ ಔಷಧಿ ಸಿಂಪಡಿಸಿದ ಕಳೆ ತಿಂದು ಗ್ರಾಮದಲ್ಲಿ ೬೦ ಕ್ಕೂ ಹೆಚ್ಚು ಕುರಿ, ಮೇಕೆ, ಎಮ್ಮೆ ಹಾಗೂ ಹಸಗಳು ಸರಣಿ ಸಾವನ್ನಪ್ಪಿವೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಎಮ್ಮೆ ಹಾಗೂ ಕುರಿಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಿಲ್ಲಿಸಿ ಪ್ರತಿಭಟನೆ ನಡೆಸಿದ ರೈತರು, ಕೂಡಲೆ ಒತ್ತುವರಿ ತೆರವುಗೊಳಿಸಿ, ರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ರು. ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಒತ್ತುವರಿದಾದರರು ಗಲಾಟೆ ಮಾಡಿದ್ರು. ಇದರಿಂದ ಬೇಸರಗೊಂಡ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಸ್ವೀಕರಿಸಿ ಇಬ್ಬರನ್ನ ಸಮಾಧಾನ ಮಾಡಿ ಕಳುಹಿಸಿದ್ರು.

Conclusion:ಇನ್ನೂ ಇದೆ ವೇಳೆ ಒತ್ತುವರಿದಾರರ ಮೇಲೆ ಕಾನೂನು ರೀತಿಯ ಕ್ರಮ ವಹಿಸಬೇಕೆಂದು ಒತ್ತಾಯ ಮಾಡಿದ್ರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.