ಕೋಲಾರ: ಲಾಕ್ಡೌನ್ನಿಂದಾಗಿ ಸೂಕ್ತ ಬೆಲೆ ಸಿಗದೆ ನೊಂದ ರೈತನೋರ್ವ ಕಷ್ಟುಪಟ್ಟು ಬೆಳೆದ ಹೂವನ್ನು ನಾಶ ಮಾಡಿದ್ದಾನೆ.
ಮುಳಬಾಗಿಲು ತಾಲೂಕಿನ ಬಂಗವಾದಿ ಗ್ರಾಮದ ರೈತ ನಂದೀಶ್ ರೆಡ್ಡಿ ಬೆನ್ ಸ್ಟಾಲ್ ಎಂಬ ಚೆಂಡು ಹೂವನ್ನು ಬೆಳೆದಿದ್ದರು. ಉತ್ತಮ ಫಸಲು ಬಂದಿರುವ ವೇಳೆ ಲಾಕ್ಡೌನ್ನಿಂದಾಗಿ ಹೂವಿಗೆ ಬೆಲೆ ಇಲ್ಲದಂತಾಗಿದೆ. ಇದರಿಂದ ಬೇಸತ್ತ ನಂದೀಶ್ ರೆಡ್ಡಿ ಟ್ರ್ಯಾಕ್ಟರ್ ಮೂಲಕ ಹೂವನ್ನು ನಾಶ ಮಾಡಿದ್ದಾನೆ.
ಓದಿ : ಆದಾಯ ಮೀರಿ ಆಸ್ತಿ ಗಳಿಕೆ : ಕೋಲಾರದ ಡಿಹೆಚ್ಒ ಅಮಾನತು
ಪ್ರತಿ ಸಸಿಗೆ ಎರಡು ರೂಪಾಯಿಯಂತೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಚೆಂಡು ಹೂ ಸಸಿಗಳನ್ನು ತಂದು ನಾಟಿ ಮಾಡಿದ್ದ ರೈತ, ಗೊಬ್ಬರ ಇತ್ಯಾದಿಗಳೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾನೆ. ಇದೀಗ ಬೆಲೆ ಇಲ್ಲದೆ ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶ ಮಾಡಿದ್ದಾನೆ. ಹೂ, ತರಕಾರಿ ಬೆಳೆಗಳಿಗೆ ವಿಶೇಷವಾದ ಪ್ಯಾಕೇಜ್ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ನಿಲ್ಲಬೇಕೆಂದು ರೈತರು ಮನವಿ ಮಾಡಿದ್ದಾರೆ.