ETV Bharat / state

ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ...

ಕೆಜಿಎಫ್ ತಾಲೂಕಿನ ಯರ್ರಗುಂಟೆ ಬಳಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಬಂಗಾರಪೇಟೆ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಮೂವರನ್ನ ಬಂಧಿಸಿದ್ದಾರೆ.

Excise officers raid on Burglary at kolara
ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ
author img

By

Published : Apr 30, 2020, 12:45 PM IST

ಕೋಲಾರ : ಪ್ರತ್ಯೇಕ ಪ್ರಕರಣಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಮೂವರನ್ನ ಬಂಧಿಸಿರುವ ಘಟ‌ನೆ ಜಿಲ್ಲೆಯಲ್ಲಿ ಜರುಗಿದೆ. ಕೆಜಿಎಫ್ ತಾಲೂಕಿನ ಯರ್ರಗುಂಟೆ ಬಳಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಬಂಗಾರಪೇಟೆ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನ ಬಂಧಿಸಿದ್ದಾರೆ. ಒಂದು ಬೈಕ್, 10 ಲೀಟರ್ ಕಳ್ಳಭಟ್ಟಿ ಹಾಗೂ ಕೆಲ ಪರಿಕರಗಳನ್ನ ವಶಕ್ಕೆ ಪಡೆದಿದ್ದಾರೆ.

ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ..

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕತ್ತಿಬೀಸನಹಳ್ಳಿ ಕ್ರಾಸ್‌ ಬಳಿ ಕಳ್ಳಭಟ್ಟಿ ರಫ್ತು ಮಾಡುತ್ತಿರುವ ವೇಳೆ ದಾಳಿ‌ ನಡೆಸಿರುವ ಅಧಿಕಾರಿಗಳು ಕಳ್ಳಭಟ್ಟಿ ಸೇರಿ ಒಂದು ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಕಳ್ಳಭಟ್ಟಿ ರಫ್ತು ಮಾಡುತ್ತಿದ್ದ ವ್ಯಕ್ತಿ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಈವರೆಗೂ ಸುಮಾರು 26 ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಭಾರತೀಯ ಮದ್ಯ 770, ಬಿಯರ್ 320, ಸೇಂದಿ 51 ಹಾಗೂ 46 ಲೀಟರ್ ಕಳ್ಳಭಟ್ಟಿ, 385 ಬೆಲ್ಲದ ಕೊಳೆ ಸೇರಿ ಅಕ್ರಮದ ಮದ್ಯ ತಯಾರಿಕೆಗೆ ಬಳಸುತ್ತಿದ್ದ 8 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.