ಕೋಲಾರ: ಕುರಿಗಾಹಿ ಮೇಲೆ ಆನೆ ಹಿಂಡು ದಾಳಿ ಮಾಡಿದ ಪರಿಣಾಮ ಕುರಿಗಾಹಿ ಸಾವನ್ನಪ್ಪಿರುವ ಘಟನೆ ಬಂಗಾರಪೇಟೆ ತಾಲೂಕಿನ ಮಲ್ಲೇಶನಪಾಳ್ಯದ ಬಳಿ ನಡೆದಿದೆ. ಗ್ರಾಮದ ತಿಮ್ಮರಾಯಪ್ಪ (55) ಆನೆ ದಾಳಿಯಿಂದ ಮೃತಪಟ್ಟಿರುವ ಕುರಿಗಾಹಿ.
ತಿಮ್ಮರಾಯಪ್ಪ ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಂಗಾರಪೇಟೆಯ ಚಾಕಸರನಹಳ್ಳಿ ಗಡಿ ಭಾಗದಲ್ಲಿ ಬೀಡು ಬಿಟ್ಟಿರುವ ಸುಮಾರು 40 ಕಾಡಾನೆಗಳ ಗುಂಪು, ರೈತರು ಬೆಳೆದಿರುವ ಬೆಳೆಗಳನ್ನ ಸಹ ಹಾಳು ಮಾಡುತ್ತಿವೆ. ಇದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮೊದಲ ಹಂತದ ಗ್ರಾ.ಪಂಚಾಯತಿ ಚುನಾವಣೆ: ಪ್ರತ್ಯಕ್ಷ ವರದಿ
ಗಡಿಯಂಚಿನ ರೈತರು ಕಾಡಾನೆಗಳ ಹಾವಳಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆಗಳ ದಾಳಿಯಿಂದ ರೈತ ಮೃತಪಟ್ಟಿದ್ದರು ಸಹ ಸ್ಥಳಕ್ಕೆ ಬಾರದ ಹಾಗೂ ಸೂಕ್ತ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.