ETV Bharat / state

ಸಾಮಾಜಿಕ ಜಾಲತಾಣದ ಮೂಲಕ ಕುಡಿಯುವ ನೀರಿನ ಬಗ್ಗೆ ಅಪಪ್ರಚಾರ: ಡಿಸಿ ತಪಾಸಣೆ

ಕೆ ಸಿ ವ್ಯಾಲಿಯಲ್ಲಿ ಅಶುದ್ಧ ನೀರನ್ನು ಕೋಲಾರ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ನೀರಿನ ಗುಣಮಟ್ಟ ತಪಾಸಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಜಿ.ಮಂಜುನಾಥ
author img

By

Published : May 22, 2019, 2:57 AM IST

ಕೋಲಾರ: ಬಯಲು ಸೀಮೆ ಜಿಲ್ಲೆ ಕೋಲಾರಕ್ಕೆ ಸ್ವಾತಂತ್ರ್ಯ ನಂತರ ಮಾಡಲಾದ ಮೊದಲ ನೀರಾವರಿ ಯೋಜನೆ ಅಂದರೆ ಅದು ಕೆ ಸಿ ವ್ಯಾಲಿ. ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆ. ಈ ಯೋಜನೆಗೆ ಆರಂಭದಿಂದಲೂ ಸಾಕಷ್ಟು ವಿಘ್ನಗಳು ಎದುರಾಗುತ್ತಲೇ ಇದೆ.

ನೀರಿನ ಗುಣಮಟ್ಟ ತಪಾಸಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಜಿ.ಮಂಜುನಾಥ

ಈ ನೀರಿನ ಶುದ್ಧತೆ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಲಾಗಿತ್ತು. ಕೋರ್ಟ್​ ಎಲ್ಲವನ್ನು ಪರಿಶೀಲಿಸಿ ನೀರು ಹರಿಸಲು ಗ್ರೀನ್​ ಸಿಗ್ನಲ್​ ನೀಡಿತ್ತು. ಹೀಗಿದ್ದೂ ಕೂಡ ಮನ್ನೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೆ ಸಿ ವ್ಯಾಲಿಯಲ್ಲಿ ಅಶುದ್ಧ ನೀರನ್ನು ಕೋಲಾರ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್​ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ತಂಡ, ಕೋಲಾರ ತಾಲೂಕು ಸಿಂಗೇಹಳ್ಳಿ, ನರಸಾಪುರ, ಮತ್ತು ಲಕ್ಷ್ಮೀಸಾಗರ ಕೆರೆಗಳಿಗೆ ಭೇಟಿನೀಡಿ ನೀರಿನ ಶುದ್ಧತೆಯನ್ನು ಪರಿಶೀಲಿಸಿದ್ರು.

ಈ ವೇಳೆ ನೀರಿನ ಗುಣಮಟ್ಟ ಉತ್ತಮವಾಗಿರುವುದು ಖಾತ್ರಿಯಾಯಿತು.ಅಲ್ಲದೆ ಪ್ರತಿದಿನ ನೀರಿನ ಗುಣಮಟ್ಟದ ಬಗ್ಗೆ ವೆಬ್​ಸೈಟ್​ನಲ್ಲೇ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದ್ರು.

Intro:ಆಂಕರ್: ​ಆ ನೀರಿನ ಶುದ್ದತೆಗೆ ಸುಪ್ರೀಂ ಕೋರ್ಟೇ ಅಸ್ತು ಅಂದ್ರು ಕೂಡಾ ಆ ಯೋಜನೆಯ ವಿರೋಧಿಗಳು ತಮ್ಮ ಕುತಂತ್ರಿ ಕೆಲಸವನ್ನು ಮಾತ್ರ ನಿಲ್ಲಿಸಿಲ್ಲ, ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಅಪಪ್ರಚಾರಕ್ಕೆ ಇಂದು ಅಧಿಕಾರಿಗಳ ತಂಡ ಸ್ಥಳದಲ್ಲೇ ಉತ್ತರ ಕೊಟ್ಟಿತ್ತು..
Body:ಒಂದೆಡೆ ಹಸಿರು ಬಣ್ಣಕ್ಕೆ ತಿರುಗಿರುವ ಕೆರೆಯ ನೀರು, ಕೆರೆ ತುಂಬಿ ಕೋಡಿ ಹರಿಯುತ್ತಿರುವ ನೀರು, ಆ ನೀರನ್ನು ಪರಿಶೀಲನೆ ನಡೆಸುತ್ತಿರುವ ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಾಗೂ ತಂಡ. ಇದೆಲ್ಲಾ ಕಂಡು ಬಂದಿದ್ದು ಕೋಲಾರ ತಾಲ್ಲೂಕು ನಗರಸಾಪುರ, ಸಿಂಗೆಹಳ್ಳಿ, ಮತ್ತು ಲಕ್ಷ್ಮೀಸಾಗರ ಕೆರೆಯಲ್ಲಿ ಹೌದು. ಬಯಲು ಸೀಮೆ ಜಿಲ್ಲೆ ಕೋಲಾರಕ್ಕೆ ಸ್ವತಂತ್ರ್ಯಾ ನಂತರ ಮಾಡಲಾದ ಮೊದಲ ನೀರಾವರಿ ಯೋಜನೆ, ಅದು ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆ. ಈ ಯೋಜನೆಗೆ ಆರಂಭದಿಂದಲೂ ಸಾಕಷ್ಟು ವಿಘ್ನಗಳು ಎದುರಾಗುತ್ತಲೇ ಇದೆ ಈ ನೀರಿನ ಶುದ್ದತೆ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ರು ಅಲ್ಲಿಂದಲೂ ನೀರು ಹರಿಸಲು ಗ್ರೀನ್​ ಸಿಗ್ನಲ್​ ಸಿಕ್ಕ ನಂತರವೇ ನೀರು ಹರಿಸಲಾಗುತ್ತಿದೆ ಹೀಗಿದ್ರು ನಿನ್ನೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೆಸಿವ್ಯಾಲಿಯಲ್ಲಿ ಅಶುದ್ದ ನೀರನ್ನು ಕೋಲಾರ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್​ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ತಂಡ, ಕೋಲಾರ ತಾಲ್ಲೂಕು ಸಿಂಗೇಹಳ್ಳಿ, ನರಸಾಪುರ, ಮತ್ತು ಲಕ್ಷ್ಮೀಸಾಗರ ಕೆರೆಗಳಿಗೆ ಬೇಟಿ ನೀಡಿ ಅಲ್ಲಿನ ನೀರಿನ ಶುದ್ದತೆಯನ್ನು ಪರಿಶೀಲಿಸಿದ್ರು. ಈವೇಳೆ ನೀರಿನ ಗುಣಮಟ್ಟ ಉತ್ತಮವಾಗಿರುವುದು ಖಾತ್ರಿಯಾಯಿತು.ಅಲ್ಲದೆ ಪ್ರತಿದಿನ ನೀರಿನ ಗುಣಮಟ್ಟದ ಬಗ್ಗೆ ವೆಬ್​ಸೈಟ್​ನಲ್ಲೇ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದ್ರು.
ಬೈಟ್​;1 ಜೆ.ಮಂಜುನಾಥ್​ (ಜಿಲ್ಲಾಧಿಕಾರಿ, ಕೋಲಾರ)
         ಅಧಿಕಾರಿಗಳ ತಂಡ ಇಂದು ಮಾಧ್ಯಗಳ ಎದುರಲ್ಲಿ ನೀರು ಹರಿಯುತ್ತಿರುವ ಕೊನೆಯ ಪಾಯಿಂಟ್​ ಕೋಲಾರ ತಾಲ್ಲೂಕು ಸಿಂಗೇಹಳ್ಳಿ ಕೆರೆ ಹಾಗೂ ಮೊದಲ ಪಾಯಿಂಟ್​ ಲಕ್ಷ್ಮೀಸಾಗರ ಕೆರೆ ಎರಡೂ ಕಡೆ ನೀರಿನ ಗುಣಮಟ್ಟ ಪರಿಶೀಲನೆ ನಡೆಸಿದ್ರು. ಜೊತೆಗೆ ಈ ಎರಡರ ಮಧ್ಯೆ ನರಸಾಪುರ ಕೆರೆಯಲ್ಲಿ ನೀರು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದ್ದು ಈ ನೀರಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು ಹಾಗಾಗಿ ನರಸಾಪುರಕರೆಯ ನೀರನ್ನು ಪರಿಶೀಲಿಸಿದಾಗ ನೀರಿನ ಗುಣಮಟ್ಟ ಸರಿಯಾಗಿದ್ದು, ಕೆರೆಯಲ್ಲಿನ ಬೆಳೆದಿರುವ ಗಿಡಗಂಟೆಗಳು, ಅಕ್ಕಪಕ್ಕದ ಕೆಲವು ಕೈಗಾರಿಕೆಗಳಿಂದ ಕೊಳಕು ನೀರು ಹರಿಬಿಡುತ್ತಿರುವ ಬಗ್ಗೆ ಅನುಮಾನವಿದ್ದು ಅದನ್ನು ಪರಿಶೀಲಿಸುವುದಾಗಿ ಡಿಸಿ ತಿಳಿಸಿದ್ರು. ಇನ್ನು ಬರಗಾಲದ ಜಿಲ್ಲೆಯ ಅಂತರ್ಜಲ ವೃದ್ದಿಗಾಗಿ ಮಾಡಿರುವ ಈ ಯೋಜನೆಯನ್ನು ವಿರೋಧಿಸುತ್ತಿರುವವರ ಕೆಲವರ ವಿರದ್ದ ಸ್ಥಳೀಯ ಹೋರಾಟ ಗಾರರು ಆಕ್ರೋಶ ವ್ಯಕ್ತಪಡಿಸಿದ್ರು.
ಬೈಟ್​:2 ತ್ಯಾಗರಾಜ್​ (ನೀರಾವರಿ ಹೋರಾಟಗಾರ) Conclusion:ಒಟ್ಟಾರೆ ಬಯಲು ಸೀಮೆ ಜಿಲ್ಲೆಯ ಮೊದಲ ನೀರಾವರಿ ಯೋಜನೆಗೆ ಮೇಲಿಂದ ಮೇಲೆ ಎದುರಾಗುತ್ತಿರುವ ಅಡೆತಡೆಗಳನ್ನು ನೋಡಿದ್ರೆ ಇದೊಂದು ಉದ್ದೇಶ ಪೂರ್ವಕ ಕೃತ್ಯ ಅನ್ನೋ ಅನುಮಾನ ಮೂಡುತ್ತಿದೆ.ಇನ್ನಾದ್ರು ಸಣ್ಣ ನೀರಾವರಿ ಇಲಾಖೆ ಉತ್ತಮ ಗುಣಮಟ್ಟದ ನೀರು ಹರಿಸುವ ಮೂಲಕ ಕುತಂತ್ರಿಗಳಿಗೆ ತಕ್ಕ ಉತ್ತರ ನೀಡಬೇಕಿದೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.