ಕೋಲಾರ: ಕೋಲಾರದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಕಳೆದ ರಾತ್ರಿ ಸುರಿದ ಅಲಿಕಲ್ಲು ಮಳೆಯಿಂದಾಗಿ ಟೊಮೆಟೊ ಸೇರಿದಂತೆ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸೊಣ್ಣೇಗೌಡ ಎಂಬುವರ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಟೊಮೆಟೊ ಬೆಳೆ ಹಾನಿಯಾಗಿದೆ. ಅಲ್ಲದೆ ಕೋಲಾರ ಜಿಲ್ಲೆ, ಬಂಗಾರಪೇಟೆ, ಮುಳಬಾಗಿಲು, ಕೆಜಿಎಫ್ ಸೇರಿದಂತೆ ವಿವಿಧೆಡೆ ನಿನ್ನೆ ಸಂಜೆಯಿಂದ ಸುರಿದ ಮಳೆಗೆ ರೈತರು ಬೆಳೆದ ಬೆಳೆ ನಾಶವಾಗಿವೆ.
ಕೆಲ ದಿನಗಳಿಂದ ಕೊರೊನಾ ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ತೋಟದಲ್ಲಿಯೇ ಕೊಳೆಯುವಂತಹ ಪರಿಸ್ಥಿತಿ ಎದುರಾಗಿತ್ತು, ಜೊತೆಗೆ ಇದರಿಂದ ಸರಿಯಾದ ಬೆಲೆ ಸಿಗದೆ ಜಿಲ್ಲೆಯ ರೈತರು ಕೈ ಸುಟ್ಟುಕೊಂಡಿದ್ದರು. ಇದೀಗ ಮಳೆ ರೈತರನ್ನು ತಲೆ ಮೇಲೆ ಕೈಇಟ್ಟು ಕೂರುವಂತೆ ಮಾಡಿದೆ.