ETV Bharat / state

ಸಹಾಯಧನಕ್ಕಾಗಿ ಸುಳ್ಳು ಮಾಹಿತಿ ನೀಡಿದ ರೈತರಿಗೆ ಹಣ ವಾಪಸ್ ನೀಡುವಂತೆ ಕೃಷಿ ಇಲಾಖೆ ನೋಟಿಸ್

ಆದಾಯ ತೆರಿಗೆ ಪಾವತಿ ಮಾಡುತ್ತಿರುವ ರೈತರು ಕಿಸಾನ್ ಸಮ್ಮಾನ್ ಯೋಜನೆಯಡಿ ಪಡೆದಿರುವ ಅಷ್ಟೂ ಹಣವನ್ನ ಸರ್ಕಾರಕ್ಕೆ ಹಿತಿರುಗಿಸುವಂತೆ ಕೃಷಿ ಇಲಾಖೆ ರೈತರಿಗೆ ನೋಟಿಸ್ ನೀಡಿದೆ..

Kisan Samman scheme
ಸಹಾಯಧನಕ್ಕಾಗಿ ಸುಳ್ಳು ಮಾಹಿತಿ ನೀಡಿದ ರೈತರಿಗೆ ಹಣ ವಾಪಸ್ ನೀಡುವಂತೆ ಕೃಷಿ ಇಲಾಖೆ ನೋಟಿಸ್
author img

By

Published : Nov 13, 2020, 6:32 PM IST

ಕೋಲಾರ : ಆದಾಯ ತೆರಿಗೆ ಪಾವತಿಸುವ ರಾಜ್ಯದ ಸಾವಿರಾರು ರೈತರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯ ಧನ ಪಡೆದು ಫಲಾನುಭವಿಗಳಾಗಿದ್ದು, ಸದ್ಯ ಸಹಾಯಧನವನ್ನ ಹಿಂತಿರುಗಿಸುವಂತೆ ಕೃಷಿ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.

ಕೇಂದ್ರ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ ತಲಾ ₹6 ಸಾವಿರ ಹಾಗೂ ರಾಜ್ಯ ಸರ್ಕಾರ ₹4 ಸಾವಿರ ನೀಡುವ ಗುರಿಯಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನ ಜಾರಿಗೆ ಮಾಡಿದೆ. ರೈತ ಕುಟುಂಬಸ್ಥರು ಸಾಂವಿಧಾನಿಕ ಹುದ್ದೆ ಹೊಂದಿರದ, 2 ಹೆಕ್ಟೇರ್​ಗಿಂತ ಹೆಚ್ಚು ಜಮೀನು ಹೊಂದಿರದ, ಮಾಸಿಕ ₹10 ಸಾವಿರ ನಿವೃತ್ತಿ ವೇತನ ಪಡೆಯುವವರಲ್ಲದವರಿಂದ ಅರ್ಜಿ ಆಹ್ವಾನಿಸಿತ್ತು.

ಅದರಂತೆ ಅರ್ಜಿಯ ಮಾಹಿತಿ ಸುಳ್ಳು ಎಂದಾದರೆ ಸಹಾಯ ಧನ ವಾಪಸ್ ಪಡೆಯಬಹುದು ಎಂಬ ಷರತ್ತಿಗೆ ಬದ್ದವಾಗಿರುವುದಾಗಿ ರೈತರ ಸ್ವಯಂ ಘೋಷಣಾ ಪತ್ರದಲ್ಲಿ ತಿಳಿಸಲಾಗಿದೆ.

ಸಹಾಯಧನಕ್ಕಾಗಿ ಸುಳ್ಳು ಮಾಹಿತಿ ನೀಡಿದ ರೈತರಿಗೆ ಹಣ ವಾಪಸ್ ನೀಡುವಂತೆ ಕೃಷಿ ಇಲಾಖೆ ನೋಟಿಸ್

ಆದಾಯ ತೆರಿಗೆ ಪಾವತಿ ಮಾಡುತ್ತಿರುವ ರೈತರು ಕಿಸಾನ್ ಸಮ್ಮಾನ್ ಯೋಜನೆಯಡಿ ಪಡೆದಿರುವ ಅಷ್ಟೂ ಹಣವನ್ನ ಸರ್ಕಾರಕ್ಕೆ ಹಿತಿರುಗಿಸುವಂತೆ ಕೃಷಿ ಇಲಾಖೆ ರೈತರಿಗೆ ನೋಟಿಸ್ ನೀಡಿದೆ. ಆದ್ರೆ, ರೈತರು ವ್ಯವಸಾಯ ಅಭಿವೃದ್ದಿಗಾಗಿ, ಗೃಹ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಟ್ರಾಕ್ಟರ್ ಖರೀದಿ, ಗ್ರೀನ್ ಹೌಸ್ ಸೇರಿದಂತೆ ಜೀವನೋಪಾಯಕ್ಕಾಗಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇಂತಹವರು ಸೇರಿದಂತೆ ಜಿಲ್ಲೆಯಲ್ಲಿ 1620 ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇನ್ನೂ ಬ್ಯಾಂಕ್ ಹಾಗೂ ಇತರೆ ಆದಾಯ ಸಂಸ್ಥೆಗಳು ಸಾಲ ನೀಡಬೇಕಾದರೆ ಆದಾಯ ತೆರಿಗೆ ಹಾಗೂ ಇತರೆ ದಾಖಲೆಗಳನ್ನ ಮೊದಲಿಗೆ ಕೇಳುತ್ತಾರೆ. ಸಾಲ ಪಡೆಯುವುದಕ್ಕಾಗಿ ಆದಾಯ ತೆರಿಗೆ ಫೈಲ್ ಮಾಡುವ ಮೂಲಕ ಸಾಲ ಪಡೆದಿರುವ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅನ್ವಯಿಸುವುದಿಲ್ಲ.

ಆದಾಯ ತೆರಿಗೆ ಪಾವತಿಯನ್ನ ಮರೆಮಾಚಿ, ರಾಜ್ಯದಲ್ಲಿ 85,208 ರೈತರನ್ನ ಕೇಂದ್ರ ಕೃಷಿ ಸಚಿವಾಲಯ ಪತ್ತೆ ಹಚ್ಚಿ, ರಾಜ್ಯ ಸರ್ಕಾರಕ್ಕೆ ರವಾನಿಸಿದೆ. ಹಾಗಾಗಿ, ಸಹಾಯ ಧನ ಹಿಂತಿರುಗಿಸುವಂತೆ ಫಲಾನುಭವಿಗಳಿಗೆ ನೋಟಿಸ್ ಕೂಡ ನೀಡಿದೆ. ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಸಾಕಷ್ಟು ರೈತರು ಆದಾಯ ತೆರಿಗೆ ಪಾವತಿದಾರರಾಗಿರುವುದು ಬೆಳಕಿಗೆ ಬಂದಿದೆ.

ಹಾಗಾಗಿ ಡಿಡಿ ಮೂಲಕ ಹಣ ವಾಪಸ್ ಪಡೆಯುವಂತೆ ಸೂಚನೆ ನೀಡಲಾಗಿದೆ. ಇನ್ನೂ ರಾಜ್ಯದಲ್ಲಿ 56,74,940 ರೈತರು ಹೆಸರು ನೋಂದಾಯಿಸಿದ್ದಾರೆ. ವಿವಿಧ ಹಂತದ ಪರಿಶೀಲನೆ ನಂತರ 52,68,327 ರೈತರಿಗೆ ಸಹಾಯ ಧನ ಬಿಡುಗಡೆಯಾಗಿದೆ, ಈ ಪೈಕಿ, 85,208 ಮಂದಿ ಆದಾಯ ತೆರಿಗೆ ಪಾವತಿಸುತ್ತಿರುವ ಶಂಕೆ ಎದುರಾಗಿದೆ.

ಸರ್ಕಾರ ರೈತರಿಗೆ ಒಂದು ಕೈಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಂಡಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ವಾಪಸ್ ನೀಡದೆ ಇದ್ದಲ್ಲಿ ಕೃಷಿ ಇಲಾಖೆಯಿಂದ ಬರುವ ಮತ್ತಷ್ಟು ಸೌಲಭ್ಯ ಸಿಗುವುದಿಲ್ಲ. ಹಾಗಾಗಿ, ಅನಿವಾರ್ಯವಾಗಿ ರೈತರು ಹಣ ವಾಪಸ್ ಮಾಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.