ಕೋಲಾರ: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಪುಟಾಣಿ ಜಿಂಕೆ ಮರಿಯೊಂದನ್ನು ಬೀದಿನಾಯಿಗಳಿಂದ ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ನೀಡಲಾಗಿದೆ.
ನಿನ್ನೆ ಬೆಳಗ್ಗೆ ತಾಲೂಕು ವೇಮಗಲ್ ಹೋಬಳಿಯ ಬೈರಾಂಡಳ್ಳಿ ಗ್ರಾಮದ ಹರೀಶ್ ಎಂಬುವರ ತೋಟದ ಮನೆಯ ಬಳಿ ಈ ಜಿಂಕೆ ಸಿಕ್ಕಿದ್ದು ಹರೀಶ್ ಈ ಜಿಂಕೆಯನ್ನು ಒಂದು ದಿನ ಕಾಲ ತಮ್ಮ ಮನೆಯಲ್ಲೇ ಆರೈಕೆ ಮಾಡಿ ಇಂದು ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ವಶಕ್ಕೆ ನೀಡಿದ್ದಾರೆ.