ಕೋಲಾರ : ಕೊರೊನಾ ರೈತನ ಬದುಕಿನಲ್ಲಿ ಕೊಳ್ಳಿ ಇಟ್ಟಿದೆ. ಕೊರೊನಾ ಪ್ರಭಾವದಿಂದಾಗಿ ರೈತ ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ, ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಅಂಬರೀಶ್ ಎಂಬ ರೈತ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಕ್ಯಾಪ್ಸಿಕಂ ಬೆಳೆದಿದ್ದು, ಕೊರೊನಾದಿಂದಾಗಿ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ.
ಅಲ್ಲದೆ ಕೊರೊನಾದಿಂದಾಗಿ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲದೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ಕಟಾವಿಗೆ ಬಂದಿರುವ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿರುವ ಕ್ಯಾಪ್ಸಿಕಂ ಬೆಳೆಯನ್ನ ಕಿತ್ತುಹೊಗೆಯುತ್ತಿದ್ದಾರೆ. ಬೆಳೆ ಬೆಳೆಯುವುದಕ್ಕೆ ಸುಮಾರು 4 ಲಕ್ಷ ಖರ್ಚಾಗಿದ್ದು, ಬೆಲೆ ಇಲ್ಲದ ಕಾರಣ ನಷ್ಟವಾಗಿದೆ.
ಜೊತೆಗೆ ಕೊರೊನಾದಿಂದ ಕೈಸುಟ್ಟಿಕೊಂಡಿರುವ ರೈತನ ಸಂಕಷ್ಟಕ್ಕೆ ಧಾವಿಸಬೇಕೆಂದು, ಸೂಕ್ತ ರೀತಿಯ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ.