ETV Bharat / state

ವೇಮಗಲ್​ ಬಳಿ ವಾರಸುದಾರರಿಲ್ಲದ ಒಂಟೆ ಪತ್ತೆ - camel found in kolara

ವೇಮಗಲ್​ ಹೋಬಳಿ ಬೈರಂಡಹಳ್ಳಿ ಬಳಿ ವಾರಸುದಾರರಿಲ್ಲದ ಒಂಟೆಯೊಂದು ಪತ್ತೆಯಾಗಿದೆ. ಇದು ಸ್ಥಳೀಯ ಕೆಲವು ಹೊಲಗಳಿಗೆ ಹೋಗಿ ಹಿಪ್ಪುನೇರಳೆ ಬೆಳೆ ಹಾಗೂ ಕಲ್ಲಂಗಡಿ ಬೆಳೆಗಳನ್ನು ತಿಂದಿದೆ. ಆದ್ರೆ ಒಂಟೆ ಯಾರದೆಂಬ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Camel found in Kolara!
ಕೋಲಾರದಲ್ಲಿ ಒಂಟೆ ಪತ್ತೆ!
author img

By

Published : Feb 25, 2020, 7:20 PM IST

ಕೋಲಾರ: ವೇಮಗಲ್​ ಹೋಬಳಿ ಬೈರಂಡಹಳ್ಳಿ ಬಳಿ ಒಂಟೆಯೊಂದು ಪತ್ತೆಯಾಗಿದ್ದು, ಆ ಒಂಟೆ ಯಾರಿಗೆ ಸೇರಿದ್ದು ಅಥವಾ ಎಲ್ಲಿಂದ ಬಂದಿದ್ದು ಎಂಬುದರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

ಬೈರಂಡಹಳ್ಳಿಯಲ್ಲಿ ವಾರಸುದಾರರಿಲ್ಲದ ಒಂಟೆ ಪತ್ತೆ

ವಾರಸುದಾರರಿಲ್ಲದೆ ಅಸ್ವಸ್ಥವಾಗಿರುವ ಒಂಟೆ ಇಂದು ಬೈರಂಡನಹಳ್ಳಿಯ ಕೆಲವು ಜಮೀನುಗಳಿಗೆ ನುಗ್ಗಿ ಹಿಪ್ಪುನೇರಳೆ ಬೆಳೆ ಹಾಗೂ ಕಲ್ಲಂಗಡಿ ಬೆಳೆಯನ್ನು ತಿಂದಿದೆ. ಒಂಟೆ ಯಾರದೆಂದು ವಿಚಾರಿಸಲಾಗುತ್ತಿದ್ದು, ಒಂಟೆ ಮಾಲೀಕ ಅಥವಾ ಇಲ್ಲಿಗೆ ಒಂಟೆಯನ್ನು ಕರೆತಂದವರು ಯಾರು ಅನ್ನೋದು ಮಾತ್ರ ನಿಗೂಢವಾಗಿದೆ.

ಸದ್ಯ ಒಂಟೆಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ವೇಮಗಲ್​ ಪೊಲೀಸರಿಗೆ ಸುದ್ದಿ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂಟೆಯನ್ನು ಏನು ಮಾಡೋದು ಎಂದು ತಿಳಿಯದೆ ಪೊಲೀಸರು ಹಾಗೂ ಗ್ರಾಮಸ್ಥರು ಚರ್ಚೆ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.