ETV Bharat / state

ವಾಕಿಂಗ್​ ವೇಳೆ ಸಿದ್ದರಾಮಯ್ಯ ಭೇಟಿಯಾದ ಭೋವಿ ಸಮುದಾಯದ ಮುಖಂಡರು : ಕೋಲಾರಕ್ಕೆ ಬರುವಂತೆ ಒತ್ತಾಯ - ಈಟಿವಿ ಭಾರತ ಕನ್ನಡ

ಮೈಸೂರಿನ ಆಂದೋಲನ ಸರ್ಕಲ್ ಬಳಿ ಇರುವ ರಾಮಕೃಷ್ಣ ಪಾರ್ಕ್‌ನಲ್ಲಿ ಸಿದ್ದರಾಮಯ್ಯ ವಾಕಿಂಗ್ ಮಾಡುವ ವೇಳೆ ಕೋಲಾರದ ಭೋವಿ ಸಮುದಾಯದ ಮುಖಂಡರು ಭೇಟಿ ಮಾಡಿದ್ದಾರೆ.

Bhovi community leaders meet Siddaramaiah
ವಾಕಿಂಗ್​ ವೇಳೆ ಸಿದ್ದರಾಮಯ್ಯ ಭೇಟಿಯಾದ ಭೋವಿ ಸಮುದಾಯದ ಮುಖಂಡರು
author img

By

Published : Oct 28, 2022, 12:31 PM IST

ಕೋಲಾರ : ಭಾರತ ಜೋಡೋ ಯಾತ್ರೆ ಮುಗಿದ ಮೇಲೆ‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬರುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದರಂತೆ ಇಂದು ಬೆಳಗ್ಗೆ ಕೋಲಾರ ವಿಧಾನ ಸಭಾ ಕ್ಷೇತ್ರದ ತಾಲೂಕು ಭೋವಿ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಕೋಲಾರಕ್ಕೆ ಬರುವಂತೆ ಒತ್ತಾಯ ಮಾಡಿದರು.

ಇಂದು ಸಿದ್ದರಾಮಯ್ಯ ಅವರು ಮೈಸೂರಿನ ಆಂದೋಲನ ಸರ್ಕಲ್ ಬಳಿ ಇರುವ ರಾಮಕೃಷ್ಣ ಪಾರ್ಕ್‌ನಲ್ಲಿ ವಾಕಿಂಗ್ ಮಾಡುವ ವೇಳೆ ಕೋಲಾರದ ಮುಖಂಡರು ಭೇಟಿ ಮಾಡಿದ್ದಾರೆ. ಸುಮಾರು 30 ಕ್ಕೂ ಹೆಚ್ಚು ಭೋವಿ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರಿಗೆ ಹೂ ಮಾಲೆ ಹಾಕಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದರು.

ಇನ್ನು ಇದೇ ವೇಳೆ ಸಿದ್ದರಾಮಯ್ಯ ಅವರು ಮಾತನಾಡಿ, ಕೋಲಾರಕ್ಕೆ ಬರುವಂತೆ ಸಾಕಷ್ಟು ಒತ್ತಡಗಳು ಬರುತ್ತಿವೆ. ನವೆಂಬರ್ 11 ರಂದು ಕೋಲಾರಕ್ಕೆ ಬಂದು ಕಾರ್ಯಕರ್ತರೊಂದಿಗೆ ಮುಖಂಡರೊಂದಿಗೆ ಚರ್ಚೆ ಮಾಡಲಾಗುವುದು ಎಂದರು. ಅಲ್ಲದೇ ಕೋಲಾರಕ್ಕೆ ಬಂದರೆ ನೀವೆಲ್ಲರೂ ಗೆಲ್ಲಿಸುವಿರಾ ಎಂದು ತಮ್ಮದೇ ದಾಟಿಯಲ್ಲಿ ಬೆಂಬಲಿಗರನ್ನು ಪ್ರಶ್ನಿಸಿದರು. ಜೊತೆಗೆ ಕಾಂಗ್ರೆಸ್​ ಜೆಡಿಎಸ್ ಆಕಾಂಕ್ಷಿಗಳು ಸೇರಿದಂತೆ ಕ್ಷೇತ್ರದದ ಕುರಿತು ಸಮುದಾಯದ ಮುಖಂಡರೊಂದಿಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಜೆಡಿಎಸ್​ನ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮರು ಆಯ್ಕೆ: ಇಂದು ಅಧಿಕೃತ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.