ETV Bharat / state

ದಶಕಗಳಿಂದ ಮುಚ್ಚಿದ್ದ ಆಸ್ಪತ್ರೆಗೆ ಮರುಜೀವ: ಬ್ರಿಟಿಷ್ ಕಾಲದ ಸುಸಜ್ಜಿತ ಆಸ್ಪತ್ರೆಗೆ ಕಾಯಕಲ್ಪ

ಕಳೆದ ವರ್ಷ ಕೊರೊನಾ ಬಂದಾಗಲೇ ಈ ಆಸ್ಪತ್ರೆಯ ಬಳಸಿಕೊಳ್ಳಲು ಯೋಚಿಸಲಾಗಿತ್ತು. ಆದರೆ, ಆ ಕಾರ್ಯ ಕೈಗೂಡಿರಲಿಲ್ಲ. ಬಳಿಕ ಈ ವರ್ಷದ 2ನೇ ಅಲೆ ತೀವ್ರವಾಗಿದ್ದು, ಸ್ಥಳೀಯವಾಗಿ ಆಸ್ಪತ್ರೆ ಕೊರತೆ ಎದುರಾಗಿದೆ. ಈ ಹಿನ್ನೆಲೆ ಸ್ಥಳೀಯ ಯುವಕರು ಆಸ್ಪತ್ರೆಗೆ ಮರುಜೀವ ನೀಡಲು ಶ್ರಮಿಸುತ್ತಿದ್ದಾರೆ.

ದಶಕಗಳಿಂದ ಮುಚ್ಚಿದ್ದ ಆಸ್ಪತ್ರೆಗೆ ಮರುಜೀವ
ದಶಕಗಳಿಂದ ಮುಚ್ಚಿದ್ದ ಆಸ್ಪತ್ರೆಗೆ ಮರುಜೀವ
author img

By

Published : May 15, 2021, 10:38 PM IST

ಕೋಲಾರ: ಬ್ರಿಟಿಷರ ಕಾಲದಲ್ಲಿ ಚಿನ್ನದ ಗಣಿಯಲ್ಲಿ‌ ಕೆಲಸ ಮಾಡುವ ಕಾರ್ಮಿಕರಿಗಾಗಿ ಮೀಸಲಿರಿಸಿದ್ದ ಏಷ್ಯಾದ ಅತ್ಯಂತ ಸುಸಜ್ಜಿತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಿಜಿಎಂಎಲ್ ಆಸ್ಪತ್ರೆಗೆ ಇದೀಗ ಮರುಜೀವ ಬಂದಿದೆ. ಕೆಜಿಎಫ್ ಗಣಿ ಜೊತೆಗೆ ಮುಚ್ಚಲ್ಪಟ್ಟಿದ್ದ ಆಸ್ಪತ್ರೆ ಈಗ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮತ್ತೆ ತೆರೆಯಲು ಮುಂದಾಗಿದೆ. ಕೆಜಿಎಫ್​ನಲ್ಲಿ ಮೈಸೂರು ರಾಜರ ಕಾಲದಿಂದಲೂ ಚಿನ್ನಕ್ಕಾಗಿ ಗಣಿಗಾರಿಕೆ ನಡೆಯುತ್ತಿತ್ತು. ನಂತರ ಬ್ರಿಟಿಷರ ಕಾಲದಲ್ಲಿ ಆಸ್ಪತ್ರೆ ಆಧುನಿಕತೆ ಪಡೆದುಕೊಂಡಿತ್ತು. ಸಾವಿರಾರು ಮಂದಿ ಕಾರ್ಮಿಕರು ಇಲ್ಲಿನ ಗಣಿಗಳಲ್ಲಿ ಕೆಲಸ‌ ಮಾಡುತ್ತಿದ್ದರು. ಕೆಜಿಎಫ್​ ಕಾರ್ಮಿಕರಿಗಾಗಿಯೇ ಮೀಸಲಾಗಿದ್ದ ಬಿಜಿಎಂಎಲ್ ಆಸ್ಪತ್ರೆ 2001ರಲ್ಲಿ ಸ್ಥಗಿತಗೊಂಡಿತ್ತು.

ಬ್ರಿಟೀಷ್ ಕಾಲದ ಸುಸಜ್ಜಿತ ಆಸ್ಪತ್ರೆಗೆ ಮತ್ತೆ ಕಾಯಕಲ್ಪ

ಕೋಲಾರದಾದ್ಯಂತ ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆ ಬೆಡ್​ಗಳ ಕೊರತೆ ಉಂಟಾಗಿದೆ. ಈ ಕೊರತೆ ನೀಗಿಸಲು ಕೇಂದ್ರ ಸರ್ಕಾರದ ಗಣಿ ಇಲಾಖೆಯ ಸುಪರ್ದಿಯಲ್ಲಿರುವ ಬಿಜಿಎಂಎಲ್ ಆಸ್ಪತ್ರೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ತಡಮಾಡದೇ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಆಸ್ಪತ್ರೆಯ ಕಟ್ಟಡಗಳಲ್ಲಿ 200ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಈ ಕಾರ್ಯಕ್ಕೆ ಸ್ಥಳೀಯ ಯುವಕರು ಸ್ವಯಂಪ್ರೇರಿತವಾಗಿ ಸಹಕರಿಸುತ್ತಿದ್ದು, ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ಕಳೆದ ವರ್ಷ ಕೊರೊನಾ ಬಂದಾಗಲೇ ಈ ಆಸ್ಪತ್ರೆಯ ಬಳಸಿಕೊಳ್ಳಲು ಯೋಚಿಸಲಾಗಿತ್ತು. ಆದರೆ, ಆ ಕಾರ್ಯ ಕೈಗೂಡಿರಲಿಲ್ಲ. ಬಳಿಕ ಈ ವರ್ಷ 2ನೇ ಅಲೆ ತೀವ್ರವಾಗಿದ್ದು, ಸ್ಥಳೀಯವಾಗಿ ಆಸ್ಪತ್ರೆ ಕೊರತೆ ಎದುರಾಗಿದೆ. ಈ ಹಿನ್ನೆಲೆ ಸ್ಥಳೀಯ ಯುವಕರು ಆಸ್ಪತ್ರೆಗೆ ಮರುಜೀವ ನೀಡಲು ಶ್ರಮಿಸುತ್ತಿದ್ದಾರೆ. ಕೊರೊನಾ ನೆಪದಲ್ಲಿ ಇಷ್ಟುದಿನ ಮುಚ್ಚಿದ್ದ ಆಸ್ಪತ್ರೆಯನ್ನು ಮತ್ತೆ ತೆರೆಯಲಾಗುತ್ತಿದೆ. ಆಸ್ಪತ್ರೆಯನ್ನು ಕ್ರಮೇಣ ಮೇಲ್ದರ್ಜೆಗೇರಿಸಬೇಕು ಮತ್ತು ಆಧುನೀಕರಣಗೊಳಿಸಬೇಕು. ಕೊರೊನಾ ಕಾಲ ಮುಗಿದ ನಂತರವೂ ಈ‌ ಆಸ್ಪತ್ರೆ ಮುಂದುವರೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಎಲ್ಲವೂ ಅಂದುಕೊಂಡತೆ ನಡೆದರೆ ಕೋಲಾರ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯೊಂದು ಮರು ಸೇರ್ಪಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.