ETV Bharat / state

ಟೆಸ್ಟ್ ಮಾಡದೆಯೇ ಪಾಸಿಟಿವ್ ವರದಿ.. ಅನುಮಾನ ಮೂಡಿಸಿದೆ ಆರೋಗ್ಯ ಇಲಾಖೆ ನಡೆ! - ಕೊರೊನಾ ಟೆಸ್ಟ್ ಮಾಡದೆಯೇ ಪಾಸಿಟಿವ್ ಎಂದು ವರದಿ

ಯಾವುದೇ ಕೊರೊನಾ ಟೆಸ್ಟ್ ಮಾಡಿಸದಿದ್ದರೂ ಸಹ ಇಂದು ಮನೆ ಬಳಿ ಬಂದಿದ್ದ ವಕ್ಕಲೇರಿ ಗ್ರಾಮ ಪಂಚಾಯತ್​ ಸಿಬ್ಬಂದಿ,‌ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕೆಲ ಕುಟುಂಬಗಳಿಗೆ ತಿಳಿಸಿರುವ ಆರೋಪ ಕೇಳಿಬಂದಿದೆ.

Kolar
Kolar
author img

By

Published : May 2, 2021, 7:29 PM IST

ಕೋಲಾರ: ಆರೋಗ್ಯ ಇಲಾಖೆಯವರು ಮಾಡಿರುವ ಎಡವಟ್ಟಿನಿಂದ, ಕೊರೊನಾ ಟೆಸ್ಟ್ ಮಾಡದೆಯೇ ಪಾಸಿಟಿವ್ ಎಂದು ವರದಿ ಬಂದಿದೆ ಎನ್ನಲಾಗ್ತಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಕೊರೊನಾ ಪರೀಕ್ಷೆ ನಡೆಸದೆ ಪಾಸಿಟಿವ್ ಎಂದು ಆರೋಗ್ಯ ಇಲಾಖೆ ವರದಿ ನೀಡಿದ್ದು, ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮಪಂಚಾಯತ್​ ವ್ಯಾಪ್ತಿಗೆ ಸೇರಿದ ಕೂತಾಂಡಹಳ್ಳಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕೊರೊನಾ ಪರೀಕ್ಷೆ ನಡೆಸದೆ ಪಾಸಿಟಿವ್ ಎಂದು ವರದಿ ನೀಡಲಾಗಿದೆ. ಕೂತಾಂಡಹಳ್ಳಿ ಗ್ರಾಮದ ಯಲ್ಲಪ್ಪ,‌ ಮಂಜುಳ‌ ಹಾಗೂ ಮುರಳಿ ಎಂಬುವರ ಕುಟುಂಬಸ್ಥರು ಆರೋಗ್ಯವಾಗಿದ್ದು, ಇದುವರೆಗೂ ಯಾವುದೇ ಕೊರೊನಾ ಟೆಸ್ಟ್ ಮಾಡಿಸಿರಲಿಲ್ಲ. ಹೀಗಿದ್ದರೂ ಸಹ ಇಂದು ಮನೆ ಬಳಿ ಬಂದಿದ್ದ ವಕ್ಕಲೇರಿ ಗ್ರಾಮಪಂಚಾಯತ್​ ಸಿಬ್ಬಂದಿ,‌ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ಇದರಿಂದ ಆತಂಕಕ್ಕೊಳಗಾದ ಕುಟುಂಬಸ್ಥರು, ನಾವು ಕೊರೊನಾ ಪರೀಕ್ಷೆಯನ್ನೇ ಮಾಡಿಸಿಲ್ಲ, ಹೇಗೆ ಪಾಸಿಟಿವ್ ಬರುತ್ತದೆ ಎಂದು ಪ್ರಶ್ನಿಸಿ, ಮನೆ ಬಳಿ ಬಂದಂತಹ ಗ್ರಾ.ಪಂ. ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸಂಬಂಧಪಟ್ಟವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಕುಟುಂಬಸ್ಥರು, ವೈದ್ಯರು,‌ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್​ನವರ ಬೇಜವಾಬ್ದಾರಿಯಿಂದಾಗಿ ಮಕ್ಕಳು,‌ ಮಹಿಳೆಯರು ಸೇರಿದಂತೆ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೆ ಆರೋಗ್ಯ ಇಲಾಖೆ ಮೇಲೆ ಗ್ರಾಮಸ್ಥರಿಗೆ ಅನುಮಾನ ಮೂಡಿದ್ದು, ಕೊರೊನಾ ಹೆಸರಿನಲ್ಲಿ ಗೋಲ್​ಮಾಲ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.