ಕೋಲಾರ : ಮನೆ ನಿರ್ಮಾಣ ಪರವಾನಿಗೆಗಾಗಿ ವ್ಯಕ್ತಿಯೋರ್ವರಿಂದ ಲಂಚ ಪಡೆಯುವ ವೇಳೆ ನಗರಸಭೆ ಅಧಿಕಾರಿಯೋರ್ವರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ಜರುಗಿದೆ.
ನಗರಸಭೆಯ ಎಇಇ ಸುಧಾಕರ್ ಶೆಟ್ಟಿ ಎಂಬ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದು, ನಗರದ ಕಾಳಮ್ಮನ ಬಡಾವಣೆಯ ನಿವಾಸಿ ಚಲಪತಿ ಎಂಬುವವರಿಂದ ಎರಡು ಸಾವಿರ ರೂಪಾಯಿ ಲಂಚದ ಹಣ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಎಸಿಬಿ ಇನ್ಸ್‍ಪೆಕ್ಟರ್ ವೆಂಕಟಾಚಲಪತಿ ನೇತೃತ್ವದ ತಂಡ ನಗರಸಭೆಯ ಮೇಲೆ ದಾಳಿ ನಡೆಸಿದ್ದು, ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.