ETV Bharat / state

3 ವರ್ಷದ ಬಳಿಕ 4 ದಿನ ಕೊಡಗಿನಲ್ಲಿ ವೈನ್ ಹಾಗೂ ಫಲಪುಷ್ಪ ಪ್ರದರ್ಶನ - Kodagu District Collector BC Satish

ಕೊಡಗಿನಲ್ಲಿ ವೈನ್ ಮೇಳ ಹಾಗೂ ಫಲಪುಷ್ಪ ಪ್ರದರ್ಶನ - ಫೆ. 3 ರಿಂದ 6 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನ - ಗಾಂಧಿ ಮೈದಾನದಲ್ಲಿ ವೈನ್ ಮೇಳ ಆಯೋಜನೆ

fruit flower show
ಫಲಪುಷ್ಪ ಪ್ರದರ್ಶನ
author img

By

Published : Jan 28, 2023, 12:51 PM IST

ಕೊಡಗು ವೈನ್ ಹಾಗೂ ಫಲ ಪುಷ್ಪ ಪ್ರದರ್ಶನದ ಕುರಿತು ಮಾಹಿತಿ ನೀಡಿದ ಡಿಸಿ

ಕೊಡಗು: ಕೋವಿಡ್ 19 ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿತ್ತು. ಆದ್ರೆ ಈಗ ಕೊರೊನಾ ವೈರಸ್​ ಹಾವಳಿ ಕಡಿಮೆಯಾಗಿದ್ದು ಮುಂದಿನ ತಿಂಗಳ ಫೆ. 3ನೇ ತಾರೀಖಿನಿಂದ 6ರ ವರೆಗೆ ನಾಲ್ಕು ದಿನಗಳ ಕಾಲ ಮಡಿಕೇರಿಯ ರಾಜಾಸೀಟ್​ನಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಗಾಂಧಿ ಮೈದಾನದಲ್ಲಿ ವೈನ್ ಮೇಳ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಡಾ. ಬಿ ಸಿ ಸತೀಶ್​ ತಿಳಿಸಿದರು.

ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಫಲಪುಷ್ಪ ಪ್ರದರ್ಶನಲ್ಲಿ ಕೊಡಗಿನ ರಾಜರ ಕಾಲದ ನಾಲ್ಕು ನಾಡು ಅರಮನೆ ಹೈಲೈಟ್ ಆಗಿರಲಿದೆ. ಮುಂಬರುವ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಬ್ಯಾಲೆಟ್ ಪ್ಯಾಟ್, ವಿವಿ ಪ್ಯಾಡ್​ನಿಂದಲೂ ಕಲಾಕೃತಿಗಳನ್ನ ನಿರ್ಮಾಣ ಮಾಡಲಾಗುವುದು ಎಂದರು ಹೇಳಿದರು.

ಕೊಡಗು ಜಿಲ್ಲೆಯು ಕಾಫಿಗೆ ಹೆಸರಾಗಿರುವುದರಿಂದ ಕಾಫಿಯನ್ನು ಪ್ರತಿಬಿಂಬಿಸುವ ಕಾಫಿ ಕಪ್ ಹಾಗೂ ಸಾಸರ್​ಗಳು ಆಕರ್ಷಣೆಯಾಗಲಿದೆ. ಮಕ್ಕಳನ್ನು ಕೂಡ ಆಕರ್ಷಿಸಲು ಸ್ಪೈಡರ್ ಮ್ಯಾನ್, ಮಾಶಾ ಅಂಡ್ ಬಿಯರ್, ಫೋಟೋ ಪ್ರೇಮ್ ಸೇರಿದಂತೆ ವಿವಿಧ ಬಗೆಯ ಕಲಾಕೃತಿಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಕಂಡುಬರಲಿದೆ. ಅಲ್ಲದೇ, ಹಣ್ಣು ಮತ್ತು ತರಕಾರಿಗಳಿಂದಲೂ ಕಲಾಕೃತಿಗಳು ಮೂಡಿಬರಲಿದೆ ಎಂದರು‌.

ಇದನ್ನೂ ಓದಿ: ಲಾಲ್‌ಬಾಗ್ ಫ್ಲವರ್‌ ಶೋಗೆ ಸಿಎಂ ಬೊಮ್ಮಾಯಿ ಚಾಲನೆ; ಈ ಬಾರಿ ಬೆಂಗಳೂರು ಇತಿಹಾಸದ ಥೀಮ್‌

ವೈನ್ ಮೇಳವನ್ನು ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಹೀಗಾಗಿ, 60 ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 20 ಮಳಿಗೆಯನ್ನ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ಮೀಸಲಿರಸಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಹದಿನೈದು ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದೆಂದು ಬಿ.ಸಿ ಸತೀಶ ತಿಳಿಸಿದರು‌.

ಇದನ್ನೂ ಓದಿ: ವಿಜಯಪುರದಲ್ಲಿ ಫಲಪುಷ್ಪ ಪ್ರದರ್ಶನ: ಮನಸೆಳೆದ ಸಿದ್ದೇಶ್ವರ ಶ್ರೀಗಳ ಪ್ರತಿಕೃತಿ

ಬೆಂಗಳೂರಿನಲ್ಲಿ ನಡೆದ ಫಲಪುಷ್ಪ ಪ್ರದರ್ಶನ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಳೆದ ಜನವರಿ 20 ರಿಂದ 11 ದಿನಗಳ ಕಾಲ ಬೆಂಗಳೂರಿನ ಲಾಲ್​ಬಾಗ್​ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಫ್ಲವರ್ ಶೋನಲ್ಲಿ ಲಾಲ್ ಬಾಗ್, ದೊಡ್ಡಸಾಗನಕೆರೆ ಬೊಟಾನಿಕಲ್ ಗಾರ್ಡನ್, ನಂದಿ ಗಿರಿಧಾಮ, ಕೆಮ್ಮಣ್ಣುಗುಂಡಿ ಹಾಗೂ ಊಟಿಯ ಪ್ರತಿಕೃತಿಯನ್ನು ಹೂವಿನಲ್ಲಿ ಸುಂದರವಾಗಿ ಚಿತ್ರಿಸಲಾಗಿತ್ತು. ಜೊತೆಗೆ ಸ್ವಚ್ಛತೆ ಕಾಪಾಡಲು ಉದ್ಯಾನದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿತ್ತು. ಕಳೆದ ವರ್ಷದಂತೆ ಈ ವರ್ಷ ಸಹ ಮಕ್ಕಳಿಗೆ 30 ರೂ. ಮತ್ತು ವಯಸ್ಕರಿಗೆ 70 ರೂ. ಟಿಕೆಟ್ ನಿಗದಿ ಮಾಡಲಾಗಿತ್ತು. ಯೂನಿಫಾರ್ಮ್, ಐಡಿ ಕಾರ್ಡ್ ಹಾಕಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು.

ಇದನ್ನೂ ಓದಿ: ಕೊಪ್ಪಳ ಜಾತ್ರೆಯಲ್ಲಿ ಜನರ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ... ಹರಿದು ಬಂದ ಭಕ್ತಸಾಗರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.