ಮಡಿಕೇರಿ: ಕಾಡುಕುರಿಯನ್ನು ಬೇಟೆಯಾಡಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಹೆಬೆಟ್ಟಗೇರಿ ನಿವಾಸಿ ಅಪ್ಪಣ್ಣ (56) ಬಂಧಿತ ಆರೋಪಿ.
ಅಪ್ಪಣ್ಣ ಕಾಫಿ ತೋಟದಲ್ಲಿ ಉರುಳು ಹಾಕಿ ಕಾಡುಕುರಿ ಬೇಟೆಯಾಡಿದ್ದ ಎನ್ನಲಾಗ್ತಿದೆ. ತಿನ್ನುವ ಆಸೆಯಿಂದ ಬೇಟೆಯಾಡಿ, ಅಡುಗೆ ಸಿದ್ಧ ಪಡಿಸುತ್ತಿರುವಾಗ ವಿಷಯ ತಿಳಿದ ಪೊಲೀಸರು ದಾಳಿ ಮಾಡಿ 6 ಕೆ.ಜಿ ಬೇಯಿಸಿದ ಮಾಂಸ ಮತ್ತು ಉರುಳು, ಮಚ್ಚನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.