ETV Bharat / state

ಮಡಿಕೇರಿ ಸ್ಟುವರ್ಟ್ ಹಿಲ್ಸ್​‌ನಲ್ಲಿ ಕಸದ‌ ರಾಶಿ: ಹೈಕೋರ್ಟ್ ಸೂಚನೆಗೂ ಜಗ್ಗದ ನಗರಸಭೆ! - ಮಡಿಕೇರಿ ಸ್ಟುವರ್ಟ್ ಹಿಲ್ಸ್

ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ನ್ಯಾಯಪೀಠ ಸ್ಟುವರ್ಟ್ ಹಿಲ್ಸ್ ನಲ್ಲಿ ಕಸ ಸುರಿಯದೇ ಬದಲಿ ಜಾಗವನ್ನು ಗುರುತಿಸಿಸುವಂತೆ ಸೂಚಿಸಿ, ಅದಕ್ಕಾಗಿ ಎರಡು ವಾರಗಳ ಗಡುವು ನೀಡಿದೆ. ಹೈಕೋರ್ಟ್ ನೀಡಿರುವ ಎರಡು ವಾರಗಳ ಗಡುವೂ ಮುಗಿಯುತ್ತಿದ್ದರೂ ಮಡಿಕೇರಿ ನಗರಸಭೆ ಮಾತ್ರ ಮತ್ತೆ ಅಲ್ಲಿಯೇ ಕಸ ಸುರಿಯುತ್ತಿದೆ.

Wastage Dump At Stuwart Hills In Madikeri
ಮಡಿಕೇರಿ ಸ್ಟುವರ್ಟ್ ಹಿಲ್ಸ್​‌ನಲ್ಲಿ ಕಸದ‌ ರಾಶಿ..
author img

By

Published : Nov 11, 2020, 7:27 AM IST

ಕೊಡಗು: ನಗರದಲ್ಲಿ ನಿತ್ಯವೂ ಸಂಗ್ರಹಿಸಿದ ಹತ್ತಾರು ಲೋಡ್ ಕಸವನ್ನು ಅತ್ಯಂತ ಎತ್ತರದ ಬೆಟ್ಟವಾಗಿರುವ ಸ್ಟುವರ್ಟ್ ಹಿಲ್ಸ್ ಮೇಲೆ ಮಡಿಕೇರಿ ನಗರಸಭೆ ಸುರಿಯುತ್ತಿದೆ. ಅಲ್ಲೇ ಕೊಳೆಯುತ್ತಿರುವ ಕಸ ಕೊಳಚೆ ನೀರಾಗಿ ನಗರ ಪ್ರದೇಶದ ಅಂತರ್ಜಲ ಸೇರುತ್ತಿದೆ. ಹೀಗಾಗಿ ಕಸವನ್ನು ಅಲ್ಲಿ ಸುರಿಯದಂತೆ ಹೈಕೋರ್ಟ್ ನಗರಸಭೆಗೆ ನಿರ್ದೇಶನ ನೀಡಿದೆ. ಆದರೂ ನಗರಸಭೆ ಮಾತ್ರ ಹೈಕೋರ್ಟ್ ನಿರ್ದೇಶನಕ್ಕೂ ಕ್ಯಾರೆ ಎನ್ನುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಮಡಿಕೇರಿ ಸ್ಟುವರ್ಟ್ ಹಿಲ್ಸ್​‌ನಲ್ಲಿ ಕಸದ‌ ರಾಶಿ.. ಹೈಕೋರ್ಟ್ ಮೆಟ್ಟಿಲೇರಿದ ಎಸ್‍ಆರ್‌ವಿಕೆ ವೆಲ್‍ಫೇರ್ ಅಸೋಸಿಯೇಷನ್

ಸ್ವಚ್ಛ ಕೊಡಗು ನಿರ್ಮಾಣಕ್ಕಾಗಿ ಹಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಮಡಿಕೇರಿ ನಗರಸಭೆ ಕೂಡ ಪ್ರತೀ ಮನೆ ಮನೆಗೂ ಹೋಗಿ ವಿಂಗಡಣೆ ಮಾಡಿದ ಕಸವನ್ನು ಸಂಗ್ರಹಿಸಿ ಪಟ್ಟಣದ ಅತ್ಯಂತ ಎತ್ತರದ ಬೆಟ್ಟವಾಗಿರುವ ಸ್ಟುವರ್ಟ್ ಹಿಲ್ಸ್​ನಲ್ಲಿ ವಿಲೇವಾರಿ ಮಾಡುತ್ತಿದೆ. ಆದರೆ ಸಂಗ್ರಹಿಸಿದ ಕಸವನ್ನು ಮರು ಪರಿಷ್ಕರಣೆ ಮಾಡುವುದರಲ್ಲಿ ಮಾತ್ರ ಸಂಪೂರ್ಣ ಸೋತಿದೆ ಎನ್ನಲಾಗ್ತಿದೆ. ಸ್ಟುವರ್ಟ್ ಹಿಲ್ಸ್‌ನಲ್ಲಿ ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಕಸ ಸುರಿಯುತ್ತಿರುವುದನ್ನು ಪ್ರಶ್ನಿಸಿ ಎಸ್‍ಆರ್‌ವಿಕೆ ವೆಲ್‍ಫೇರ್ ಅಸೋಸಿಯೇಷನ್ ಎಂಬ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.

ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ಪೀಠ ಸ್ಟುವರ್ಟ್ ಹಿಲ್ಸ್‌ನಲ್ಲಿ ಕಸ ಸುರಿಯದೇ ಬದಲಿ ಜಾಗವನ್ನು ಗುರುತ್ತಿಸುವಂತೆ ಸೂಚಿಸಿ ಅದಕ್ಕಾಗಿ 2 ವಾರಗಳ ಗಡುವು ನೀಡಿದೆ. ಹೈಕೋರ್ಟ್ ನೀಡಿರುವ ಎರಡು ವಾರಗಳ ಗಡುವೂ ಮುಗಿಯುತ್ತಿದ್ದರೂ ಮಡಿಕೇರಿ ನಗರಸಭೆ ಮಾತ್ರ ಮತ್ತೆ ಅಲ್ಲಿಯೇ ಕಸ ಸುರಿಯುತ್ತಿರುವುದು ಮಾತ್ರ ವಿಪರ್ಯಾಸ.

ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿಷ್ಕರಿಸಲು ನಗರಸಭೆ ಹಲವು ವರ್ಷಗಳ ಹಿಂದೆಯೇ ಯಂತ್ರೋಪಕರಣಗಳನ್ನು ಅಳವಡಿಸಿದೆ. ಆದರೆ ಎಲ್ಲಾ ಯಂತ್ರಗಳೂ ಸಂಪೂರ್ಣ ಕೆಟ್ಟು ನಿಂತಿದ್ದು, ಅದಕ್ಕಾಗಿ ಹೂಡಿಕೆ ಮಾಡಿದ್ದ ಕೋಟ್ಯಂತರ ಹಣ ಕೂಡ ಪೋಲಾಗಿದೆ. ಹೈಕೋರ್ಟ್ ನಿರ್ದೇಶನದ ಬಳಿಕ ಮೂರು ಕಡೆಗಳಲ್ಲಿ ಜಾಗ ಗುರುತಿಸಿದ್ದೇವೆ. ಆದರೆ ಮೂರು ಕಡೆಗಳಲ್ಲೂ ಜನವಸತಿ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಮುಂದೆ ಕೋರ್ಟ್ ನೀಡುವ ನಿರ್ದೇಶನವನ್ನು ಪಾಲಿಸುತ್ತೇವೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಸದ್ಯ ಪ್ರವಾಸೋದ್ಯಮ ಅಭಿವೃದ್ಧಿಗೆಂದು ನಾಲ್ಕು ಕೋಟಿ ಹಣವನ್ನು ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ. ಇದೇ ಹಣವನ್ನು ಕಸ ವಿಲೇವಾರಿಗಾದರೂ ಕೊಡಬಹುದಿತ್ತು ಎನ್ನುವುದು ಪರಿಸರ ಪ್ರಿಯರ ಅಭಿಪ್ರಾಯ. ಒಟ್ಟಿನಲ್ಲಿ ಕಳೆದ 15 ವರ್ಷಗಳಿಂದ ಸ್ಟುವರ್ಟ್ ಹಿಲ್ಸ್​ನಲ್ಲಿ ಬರೋಬ್ಬರಿ 60 ಸಾವಿರ ಟನ್ ಕಸ ಸಂಗ್ರಹಣೆಯಾಗಿದ್ದು, ದೊಡ್ಡ ಬೆಟ್ಟವಾಗಿ ಬೆಳೆದಿರೋದು ಮಾತ್ರ ವಿಪರ್ಯಾಸ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.