ಕೊಡಗು: ತಲಕಾವೇರಿ ಬ್ರಹ್ಮಗಿರಿ ಬೆಟ್ಟಸಾಲು ಕುಸಿದು ಕಣ್ಮರೆಯಾಗಿರುವ ಅರ್ಚಕ ನಾರಾಯಣ ಆಚಾರ್ ಅವರ ಇಬ್ಬರು ಮಕ್ಕಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ಮಾಡಿ ಕಾರ್ಯಚರಣೆ ಬಗ್ಗೆ ವಿವರಿಸಿ ಧೈರ್ಯ ತುಂಬಿದರು.
ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ರಾಷ್ಟಗಳಲ್ಲಿ ನೆಲೆಸಿದ್ದ ಅರ್ಚಕರ ಇಬ್ಬರು ಹೆಣ್ಣು ಮಕ್ಕಳು, ಕಣ್ಮರೆಯಾಗಿರುವ ಕುಟುಂಬಸ್ಥರನ್ನು ನೋಡಲು ಜಿಲ್ಲೆಗೆ ಆಗಮಿಸಿದ್ದಾರೆ. ಇದೇ ವೇಳೆ ಅವರನ್ನು ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಭೇಟಿ ಮಾಡಿ ಸಾಂತ್ವನ ಹೇಳಿದರು.
ಅಲ್ಲದೆ ಮಳೆ ಇದ್ದಿದ್ದರಿಂದ ಇಷ್ಟು ದಿನಗಳು ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಹಾಗೆಯೇ ದುರ್ಘಟನಾ ಸ್ಥಳಕ್ಕೆ ಯಂತ್ರೋಪಕರಣಗಳನ್ನು ಕೊಂಡೊಯ್ಯಲು ಆಗಿದ್ದ ಸಮಸ್ಯೆಗಳನ್ನು ವಿವರಿಸಿದ್ದಾರೆ. ಕಣ್ಮರೆಯಾದವರ ಪತ್ತೆಗೆ ಪ್ರಯತ್ನ ಮೀರಿ ಹುಡುಕುವುದಾಗಿ ಭರವಸೆಯನ್ನು ನೀಡಿದ್ದಾರೆ.