ಕೊಡಗು: ಜಿಲ್ಲೆಯಲ್ಲಿ ಮತ್ತೆ 3 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ನಾಪೋಕ್ಲುವಿನ ಬೇತು ಗ್ರಾಮದ 52 ವರ್ಷದ ಮಹಿಳೆ, ನೀರುಕೊಲ್ಲಿಯ ನಾಗರಾಜ ದೇವಸ್ಥಾನದ ಕಲ್ಲುಕೋರೆ ಸಮೀಪದ 45 ವರ್ಷದ ಪುರುಷ ಹಾಗೂ ಕುಶಾಲನಗರದ ಕಣಿವೆಯ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 21 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಇನ್ನು ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಕೆನರಾ ಬ್ಯಾಂಕ್ ಹಿಂಭಾಗ, ಬೇತು ಗ್ರಾಮ, ನಾಪೋಕ್ಲು ಮತ್ತು ನಾಗರಾಜ ದೇವಸ್ಥಾನದ ಸಮೀಪ, ಕಲ್ಲುಕೋರೆ, ನೀರುಕೊಲ್ಲಿ, ಮಡಿಕೇರಿ ಭಾಗದಲ್ಲಿ ಕಂಟೇನ್ಮೆಂಟ್ ವಲಯಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 314 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 136 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 73 ಸಕ್ರಿಯ ಪ್ರಕರಣಗಳಿದ್ದು, 5 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 102 ಕಂಟೇನ್ಮೆಂಟ್ ವಲಯಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.