ಕೊಡಗು : ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದ ಉತ್ತಯ್ಯ ಎಂಬ ಯೋಧನ ಪತ್ನಿ ಪಾರ್ವತಿ 19 ವರ್ಷಗಳಿಂದ ತನ್ನ ಗಂಡ ಮರಳಿ ಮನೆಗೆ ಬರುತ್ತಾನೆಂದು ಕಾಯುತ್ತಿದ್ದಾಳೆ. ಆದರೆ, ಸೇನೆಯಿಂದ ಯೋಧ ಉತ್ತಯ್ಯ ಸಾವನ್ನಪ್ಪಿದ್ದಾರೆಂಬ ಮಾಹಿತಿ ಬಂದಿದೆ.
1985ರಲ್ಲಿ ಸೈನ್ಯಕ್ಕೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ನಂತರ ಸೈನ್ಯಕ್ಕೆ ಮರಳುತ್ತಾರೆ. ಅಂದು ಸೇನೆಗೆ ಹೋದವರು ಇಂದಿಗೂ ವಾಪಸ್ಸಾಗಿಲ್ಲ. ಈ ಬಗ್ಗೆ ಸೈನ್ಯದಲ್ಲಿ ವಿಚಾರಣೆ ಮಾಡಿದರೆ, ಮೊದ ಮೊದಲು ಉತ್ತಯ್ಯ ಮಿಸ್ಸಿಂಗ್ ಎಂದು ಹೇಳುತ್ತಿದ್ದರಂತೆ. ಆದರೆ, ಇದೀಗ ಉತ್ತಯ್ಯ ಮೃತ ಪಟ್ಟಿದ್ದಾರೆ ಎಂದು ಸೇನೆ ಹೇಳುತ್ತಿದೆಯಂತೆ.
ಉತ್ತಯ್ಯ ಮೃತಪಟ್ಟಿದ್ದರೆ ಅದಕ್ಕೆ ಸಾಕ್ಷಿ ಕೊಡಿ ಎಂದು ಯೋಧನ ಪತ್ನಿ ಪಾರ್ವತಿ ಸೇನೆಯಲ್ಲಿ ಕೇಳಿಕೊಂಡರೂ ಸೇನೆ ಈ ಬಗ್ಗೆ ನಿಖರ ಸಾಕ್ಷಿ ನೀಡುತ್ತಿಲ್ಲ. 1999ರ ಅಗಸ್ಟ್ ತಿಂಗಳು, ಉತ್ತರಪ್ರದೇಶದಲ್ಲಿ ಸ್ನಿಗ್ನಲ್ ಬೆಟಾಲಿಯನ್‌ನಲ್ಲಿ ಲ್ಯಾನ್ಸ್ ನಾಯಕ ಆಗಿದ್ದ ಉತ್ತಯ್ಯ ಮನೆಗೆ ಬಂದಿದ್ರು. 20 ದಿನದ ನಂತ್ರ ತನ್ನ ಗರ್ಭಿಣಿ ಮಡದಿಯನ್ನು ಬಿಟ್ಟು ಸೇನೆಗೆ ಮೆಳಿದ್ದರು.
ಉತ್ತಯ್ಯ ನವಂಬರ್ 21ರಂದು ಪತ್ನಿಗೆ ಕರೆ ಮಾಡಿ ನನಗೆ ಹುಶಾರಿಲ್ಲ ಅಂತಾ ಹೇಳಿದ್ರು. ಅದೇ ಕಡೆಯ ಕರೆ. ಆ ನಂತರ ಉತ್ತಯ್ಯ ಮನೆಗೆ ಕರೆ ಮಾಡಿಯೇ ಇಲ್ಲ. ನಂತರ ಸೇನೆಯಿಂದ ಡಿಸೆಂಬರ್ 4ರಂದು ಯೋಧ ಉತ್ತಯ್ಯನ ಮನೆಗೆ ಒಂದು ಟೆಲಿಗ್ರಾಂ ಬರುತ್ತೆ. ಅದರಲ್ಲಿ ಉತ್ತಯ್ಯ ಸೈನ್ಯದ ಯುನಿಟ್‌ನಲ್ಲಿ ಇಲ್ಲ.. ಊರಲ್ಲಿ ಇದ್ದರೆ ಕಳುಹಿಸಿಕೊಡಿ ಎಂದು ಬರೆಯಲಾಗಿರತ್ತೆ. ಆ ಸುದ್ದಿ ಕೇಳಿ ಪಾರ್ವತಿಗೆ ಡೆಲಿವರಿಯಾಗಿ ಮಗು ಸಾವನ್ನಪ್ಪಿದೆ.
2010 ರಿಂದ ಉತ್ತಯ್ಯ ಮರಣ ಹೊಂದಿದ್ದಾರೆ ಎಂದು ಪತ್ರ ಕಳುಹಿಸಿದ ಸೇನೆ, ಉತ್ತಯ್ಯನ ಪತ್ನಿಗೆ ಪೆನ್ಷನ್ ಕೊಡಲು ಆರಂಭಿಸುತ್ತೆ. ಆದರೆ, ಸರ್ಕಾರ ಯೋಧನ ಮೃತದೇಹದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಪತ್ನಿ ಮಾತ್ರ ನೀನು ಯಾವಾಗ ಬರ್ತೀಯಾ ಅಂತಾ ಶಬರಿಯಂತೆ ಪತಿಗಾಗಿ ಕಾಯ್ತಾನೆ ಇದ್ದಾರೆ.