ಕೊಡಗು: ಪ್ರವಾಹ ತಗ್ಗಿದರೂ ನೀರಿನ ಸೆಳೆತಕ್ಕೆ ರಸ್ತೆ ಬದಿಯ ಮಣ್ಣು ಕುಸಿಯುತ್ತಿರುವ ಘಟನೆ ವಿರಾಜಪೇಟೆ ತಾಲೂಕಿನ ಗುಹ್ಯ ರಸ್ತೆಯಲ್ಲಿ ನಡೆದಿದೆ.
ಕಾವೇರಿ ನದಿ ನೀರಿನಿಂದ ಗುಹ್ಯ ಸಂಪರ್ಕ ರಸ್ತೆ ಕುಸಿದು ಬೀಳುತ್ತಿದ್ದು, ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಸಿದ್ದಾಪುರದಿಂದ ಗುಹ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕ್ಷಣ ಕ್ಷಣಕ್ಕೂ ನದಿಗೆ ಕುಸಿದು ಬೀಳುತ್ತಿದೆ. ಕಳೆದ ನಾಲ್ಕು ದಿನಗಳಿಂದ ಪ್ರವಾಹದ ನೀರು ಹರಿದು ಸಡಿಲಗೊಂಡಿರುವ ರಸ್ತೆಯ ಮಣ್ಣು ನಿಧಾನವಾಗಿ ನದಿಗೆ ಬೀಳುತ್ತಿದೆ. ಇದರಿಂದ ಗುಹ್ಯ ಗ್ರಾಮದ ಜನರಲ್ಲಿ ಆತಂಕ ಎದುರಾಗಿದೆ.