ಕೊಡಗು: ಜಿಲ್ಲೆಯಲ್ಲಿ ವರ್ಷಪೂರ್ತಿ ಒಂದಿಲ್ಲೊಂದು ಸ್ಪರ್ಧೆಗಳು ನಡೆಯುತ್ತಿರುತ್ತವೆ. ಆದರೆ ಈ ಸ್ಪರ್ಧೆ ಹಲವಾರು ಜನರ ಗಮನ ಸೆಳೆದಿದೆ.
ಹೌದು, ಕುಶಾಲನಗರ ಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ಕೇಶ ವಿನ್ಯಾಸ ಸ್ಪರ್ಧೆ ಎಲ್ಲರ ಗಮನ ಸೆಳೆದಿದೆ.
ಇಂದಿನ ಯುವಕರ ಟ್ರೆಂಡ್ ತಕ್ಕಂತೆ ಸಿದ್ಧಗೊಳಿಸುವ ಕ್ಷೌರಿಕರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಲುಕ್ಸ್ ಬ್ಯೂಟಿ ಕೇರ್ ವತಿಯಿಂದ ನಡೆದ ಸ್ಪರ್ಧೆ ಯಲ್ಲಿ 50ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಯಿತು ಕಟ್ ಅಂಡ್ ಕಲರ್, ಹೇರ್ ಟ್ಯಾಟೂ, ಮಹಿಳೆಯರ ಹೇರ್ ಸ್ಟೈಲ್, ವಿನೂತನ ಹೇರ್ ಕಟ್ ಮತ್ತು ಸ್ವಂತ ವಿನ್ಯಾಸದ ಜನರ ಮೆಚ್ಚುಗೆಗೆ ಪಾತ್ರವಾದವು.
ಕೇವಲ ಬಾಚಣಿಗೆ, ಕತ್ತರಿ,ಎತ್ತರದ ಕುರ್ಚಿ, ಉದ್ದದ ಕನ್ನಡಿ ಇಟ್ಟುಕೊಂಡು ಕ್ಷೌರಿಕ ವೃತ್ತಿ ಮಾಡಿಕೊಂಡು ಬರುತ್ತಿರುವ ಸವಿತಾ ಸಮಾಜದ ಬಾಂಧವರು ಇನ್ನಷ್ಟು ಹೊಸ ತಂತ್ರಜ್ಞಾನ, ವಿನ್ಯಾಸ,ಕ್ರಿಯಾಶೀಲತೆ ರೂಢಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎನ್ನುವುದು ಆಯೋಜಕರ ಮನದಾಳದ ಮಾತು. ಮುಂದಿನ ವರ್ಷದಿಂದ ಇನ್ನಷ್ಟು ಅದ್ಧೂರಿಯಾಗಿ ಸ್ಪರ್ಧೆ ನಡೆಸಲು ಸಹ ಆಯೋಜಕರು ಚಿಂತನೆ ನಡೆಸಿದ್ದಾರೆ.