ETV Bharat / state

ದೇವಸ್ಥಾನ ಮಠಗಳನ್ನು ಬಿಟ್ಟು ಸಿದ್ದರಾಮಯ್ಯ ಬದುಕುತ್ತಿಲ್ಲ: ಈಶ್ವರಪ್ಪ ವಾಗ್ದಾಳಿ - karnataka assembly election 2023

ಚುನಾವಣೆಗಾಗಿ ಕ್ಷೇತ್ರವನ್ನು ಹುಡುಕುವ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಅವರನ್ನು ನೋಡಿದರೆ ಆಯ್ಯೋ ಪಾಪ ಅನ್ನಿಸುತ್ತದೆ ಎಂದು ಕೆಎಸ್​ ಈಶ್ವರಪ್ಪ ವ್ಯಂಗ್ಯ.

siddaramaiah-is-not-living-off-temple-monasteries-eshwarappa-rants
ಸಿದ್ದರಾಮಯ್ಯ ದೇವಸ್ಥಾನ ಮಠಗಳನ್ನು ಬಿಟ್ಟು ಬದುಕುತ್ತಿಲ್ಲ: ಈಶ್ವರಪ್ಪ ವಾಗ್ದಾಳಿ
author img

By

Published : Mar 11, 2023, 10:18 PM IST

ಸಿದ್ದರಾಮಯ್ಯ ದೇವಸ್ಥಾನ ಮಠಗಳನ್ನು ಬಿಟ್ಟು ಬದುಕುತ್ತಿಲ್ಲ: ಈಶ್ವರಪ್ಪ ವಾಗ್ದಾಳಿ

ಮಡಿಕೇರಿ: ಸಿದ್ದರಾಮಯ್ಯ ಮುಂಚೆ ಕುಂಕುಮ ಇಡುವುದಿಲ್ಲ ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಈಗ ಹಣೆ ತುಂಬಾ ಕುಂಕುಮ ಹಚ್ಚುತ್ತಾರೆ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ರಾಜ್ಯದ ಇತಿಹಾಸಲ್ಲಿ ಸಿದ್ದರಾಮಯ್ಯ ಅವರಂತಹ ದುಷ್ಟ ವ್ಯಕ್ತಿಯನ್ನು ನಾನು ನೋಡಿಲ್ಲ, ಪುರೋಹಿತಶಾಹಿ, ಮನುವಾದದ ಬಗ್ಗೆ ಮಾತನಾಡುತ್ತಿದ್ದರು, ಮುಂಚೆ ನಾನು ದೇವಸ್ಥಾನಕ್ಕೆ ಹೋಗಲ್ಲ, ಹಣೆಗೆ ಕುಂಕುಮವನ್ನೂ ಇಡುವುದಿಲ್ಲ ಅಂತಿದ್ದವರು, ಈಗ ಬೆಳಗ್ಗೆ ಎದ್ದರೆ ದೇವಸ್ಥಾನ ಹಣೆ ತುಂಬಾ ಕುಂಕುಮ ಇಡುತ್ತಾರೆ. ಇವತ್ತು ದೇವಸ್ಥಾನ, ಮಠಾಧಿಶರನ್ನು ಬಿಟ್ಟು ಸಿದ್ದರಾಮಯ್ಯ ಬದುಕುತ್ತಿಲ್ಲ’’ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರ ನಾಟಕೀಯ ಬುಡಬುಡಕೆ ತನವನ್ನ ರಾಜ್ಯದ ಜನ ಒಪ್ಪದೇ ಇರುವುದಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನ್ನ ಅನುಭವಿಸಿದರು. ಈಗ ಮುಂಬರುವ ಚುನಾವಣೆಗಾಗಿ ಕ್ಷೇತ್ರವನ್ನು ಹುಡುಕಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಅವರನ್ನು ನೋಡಿದರೆ ಆಯ್ಯೋ ಪಾಪ ಅನ್ನಿಸುತ್ತದೆ ಎಂದು ವ್ಯಂಗ್ಯವಾಡಿದರು.

ಯಾರದ್ದೋ ಕೂಸನ್ನು ನಮ್ಮದು ಎಂದು ಹೇಳಬೇಡಿ: ಬೆಂಗಳೂರು ಮತ್ತು ಮೈಸೂರು ಎಕ್ಸ್​ಪ್ರೆಸ್​ ವೇ ಕ್ರೆಡಿಟ್​ ಬಗ್ಗೆ ನಿರ್ಮಾಣದ ಬಗ್ಗೆ ಮಾತನಾಡಿದ ಕೆಎಸ್​ ಈಶ್ವರಪ್ಪ, ‘‘ಬೆಂಗಳೂರು ಮೈಸೂರು ದಶಪಥ ರಸ್ತೆ ನಿರ್ಮಾಣಕ್ಕೆ ಎರಡು ಪಕ್ಷದವರು ಇದು ನಮ್ಮ ಕೊಡುಗೆ ಎನ್ನುವುದು ಒಳ್ಳೆಯದಲ್ಲ. ರಸ್ತೆ ನಿರ್ಮಾಣಕ್ಕೆ ಕಾಂಗ್ರೆಸ್​​ ಮತ್ತು ಜೆಡಿಎಸ್​ನವರು ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ರಸ್ತೆ ನಿರ್ಮಾಣಕ್ಕೆ ಹಣ ಕೊಟ್ಟವರು ಪ್ರಧಾನಿ ನರೇಂದ್ರ ಮೋದಿ ಅವರು. ಇವತ್ತು ನಾವು ಹಣ ನೀಡಿದ್ದೇವೆ, ನಾವು ಅಭಿವೃದ್ಧಿ ಮಾಡಿದ್ದೇವೆ, ನಮ್ಮ ಕೂಸು ಎಂದು ಹೇಳಿದರೆ ಎಂದರೇ ಅದು ಹೇಗೆ. ನಿಮ್ಮ ಕೂಸು ಯಾವುದು ಅದನ್ನು ಹುಡುಕಿಕೊಂಡು, ಆ ಕೂಸಿನ ಬಗ್ಗೆ ಹೇಳಿ ನಾವು ಓಪ್ಪುತ್ತೇವೆ. ಆದರೆ ಯಾರೋ ಮಾಡಿದ ಕೂಸನ್ನು ನಮ್ಮ ಕೂಸು ಎಂದು ಮಾತ್ರ ಹೇಳಬೇಡಿ’’ ಎಂದು ಹೇಳಿದರು.

ದಶಪಥದ ಸಂಪೂರ್ಣ ಕ್ರೆಡಿಟ್ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು: ''ನಾಳೆ ಉದ್ಘಾಟನೆಯಾಗಲಿರುವ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ ದಶಪಥ ಹೆದ್ದಾರಿಯ ಸಂಪೂರ್ಣ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಯೋಜನೆ ಘೋಷಿಸಿ, ಉದ್ಘಾಟನೆ ಮಾಡುವ ಮೂಲಕ ಮೋದಿ ಈ ಯೋಜನೆಯ ರುವಾರಿಯಾಗಿದ್ದಾರೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೆಂಗಳೂರು ಮೈಸೂರು ನಡುವಿನ ರಾಜ್ಯ ಹೆದ್ದಾರಿಯನ್ನು 2004ರಲ್ಲಿ ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಲು ಆರಂಭಿಸಲಾಯಿತು. ನಂತರ ಕೇಂದ್ರ ಸರ್ಕಾರ ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ ಎಂದು 2014ರಲ್ಲಿ ಘೋಷಣೆ ಮಾಡಿತು. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡಿ 10ರಿಂದ 15 ವರ್ಷವಾದರೂ ಹಾಗೆಯೇ ಉಳಿದಿತ್ತು'' ಎಂದರು.

ಇದನ್ನೂ ಓದಿ: ಬಿಎಸ್​ವೈ ಭೇಟಿ ಮಾಡಿದ ಸುಮಲತಾ, ಭಾಸ್ಕರ್ ರಾವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.