ETV Bharat / state

ಬಿಎಸ್​​ವೈ ಹೇಳಿದ್ದು ಮೇ 23ರ ನಂತ್ರ ಕೇಂದ್ರ ಸರ್ಕಾರ ಬದಲಾಗುತ್ತದೆ ಅಂತ : ಸಾರಾ ಮಹೇಶ್ ವ್ಯಂಗ್ಯ - kannada news

ಮನುಷ್ಯ ಪ್ರಾಣಿಗಳಂತೆ ಎಲ್ಲರಿಗೂ ಖಾಸಗಿ ಬದುಕು ಹಾಗೂ ವಿಶ್ರಾಂತಿ ಆಗತ್ಯ ಅದನ್ನು ಸಿಎಂ ಮಾಡ್ತಿದ್ದಾರೆ ಎಂದು ಸಾ.ರಾ ಮಹೇಶ್ ಹೇಳಿದ್ದಾರೆ.

ಸಚಿವ ಸಾರಾ ಮಹೇಶ್ ಮತ್ತು ಸಚಿವ ಸಿ.ಎಸ್ ಪುಟ್ಟರಾಜು
author img

By

Published : May 12, 2019, 5:01 AM IST

Updated : May 12, 2019, 12:04 PM IST

ಕೊಡಗು : ಸಚಿವ ಸಾರಾ ಮಹೇಶ್ ಸಿಎಂ ಸೂಚನೆಯಂತೆ ಚುನಾವಣಾ ಆಯೋಗದ ಅನುಮತಿ ಪಡೆದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಡಗು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಜನರಿಗೆ ಆದಷ್ಟೂ ಬೇಗ ಸೂರು ಕಲ್ಪಿಸುವ ಭರವಸೆ ನೀಡಿದರು. ಇದಕ್ಕೂ ಮುನ್ನ ರೆಸಾರ್ಟ್ ಬಳಿ ಮಾತನಾಡಿದ ಅವರು, ಸಿಎಂ ಖಾಸಗಿ ರೆಸಾರ್ಟ್ ವಾಸ್ತವ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಮನುಷ್ಯ ಪ್ರಾಣಿಗಳಂತೆ ಎಲ್ಲರಿಗೂ ಖಾಸಗಿ ಬದುಕು ಹಾಗೂ ವಿಶ್ರಾಂತಿ ಆಗತ್ಯ. ಅದನ್ನು ಸಿಎಂ ಮಾಡ್ತಿದ್ದಾರೆ ಅಷ್ಟೇ. ಕೊಡಗಿನಲ್ಲಿ ಸಿದ್ದರಾಮಯ್ಯ ಉಳಿದುಕೊಂಡಿದ್ದ ರೆಸಾರ್ಟ್​​ಗೆ ಸಿಎಂ ಬಂದಿದ್ದು ಕೊಡಗು ಸೇಫ್ ಎಂಬ ಸಂದೇಶ ಸಾರಲು ಅಂತ ಸಮರ್ಥನೆ ನೀಡಿದರು. ಬಿಎಸ್​ವೈ ಹೇಳಿಕೆಗೆ ಇದೇ ವೇಳೆ ಟಾಂಗ್ ನೀಡಿ, ಯಡಿಯೂರಪ್ಪ ಹೇಳಿರೋದು ಮೇ 23ರ ನಂತರ ಕೇಂದ್ರ ಸರ್ಕಾರ ಬದಲಾಗುತ್ತೆ ಅಂತ ಎಂದು ವ್ಯಂಗ್ಯವಾಡಿದರು.

ಸಿಎಂ ಕುಮಾರಸ್ವಾಮಿ ಅವರ ಕೊಡಗು ರೆಸಾರ್ಟ್ ವಾಸ್ತವ್ಯ 2ನೇ ದಿನಕ್ಕೆ ಕಾಲಿಟ್ಟಿದ್ದು, ಸಿಎಂ ಪತ್ನಿ ಹಾಗೂ ಪುತ್ರ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಸಿಎಂ ಜೊತೆ ವಾಸ್ತವ್ಯ ಹೂಡಿದ್ದ ಸಚಿವ ಸಾ.ರಾ ಮಹೇಶ್ ರೆಸಾರ್ಟ್‌ನಿಂದ ಹೊರಬಂದು ಕೊಡಗು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ನಡೆಸಿದರು.

ಸಿಎಂ ಭೇಟಿ ಮಾಡಿದ ಸಚಿವ ಸಿ.ಎಸ್ ಪುಟ್ಟರಾಜು, ಸಿಎಂ ಟೆಂಪಲ್ ರನ್ ರಾಜ್ಯದ ಜನರ ಏಳಿಗೆಗಾಗಿ, ಅವರಿಗೂ ಖಾಸಗಿತನ ಇರುತ್ತೆ ಅಂತ ಟೆಂಪಲ್ ರನ್ ಮತ್ತು ರೆಸಾರ್ಟ್ ವಿಶ್ರಾಂತಿ ಬಗ್ಗೆ ಸಮರ್ಥನೆ ನೀಡಿದರು. ಇಂದು ರೆಸಾರ್ಟ್​ನಿಂದ ಹೊರಡಲಿರುವ ಸಿಎಂ ಮಂಡ್ಯದ ಬೀಗರೂಟಕ್ಕೆ ತೆರಳುತ್ತಾರೆ ಅಂತ ಪುಟ್ಟರಾಜು ಮಾಹಿತಿ ನೀಡಿದರು. ಇನ್ನು ಬಿಎಸ್​ವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ಹಾಗೂ ಅವರ ಮಗನ ಪರಿಸ್ಥಿತಿ ಮೊದಲು ತಿಳಿಯಲಿ ಅಂತ ಹೇಳಿದರು.

Intro:ಯಡಿಯೂರಪ್ಪ ಹೇಳಿಕೆಗೆ ಟಾಂಗ್ ನೀಡಿದ ಸಾರಾ ಮಹೇಶ್

ಹಾಸನ: ಸಿಎಂ ಕುಮಾರಸ್ವಾಮಿ ಅವರ ಕೊಡಗು ರೆಸಾರ್ಟ್ ವಾಸ್ತವ್ಯ ಎರಡನೆಯ ದಿನಕ್ಕೆ ಕಾಲಿಟ್ಟಿದ್ದು ಸಿಎಂ ಪತ್ನಿ ಹಾಗೂ ಪುತ್ರ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.
ಸಿಎಂ ಜೊತೆ ವಾಸ್ತವ್ಯ ಹೂಡಿದ್ದ ಸಚಿವ ಸಾ.ರಾ ಮಹೇಶ್ ರೆಸಾರ್ಟ್‌ನಿಂದ ಹೊರಬಂದು ಯಡಿಯೂರಪ್ಪ ಹೇಳಿಕೆಗೆ ಟಾಂಗ್ ಕೊಟ್ಟು ಕೊಡಗು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಇದೆಲ್ಲದರ ನಡುವೆ ಸಿಎಂ ನೋಡ್ಬೇಕು ಅಂತ ರೆಸಾರ್ಟ್ ಬಳಿ ಬಂದ ಜೆಡಿಎಸ್ ಕಾರ್ಯಕರ್ತರು ಸಿಎಂ ದರ್ಶನ ಸಿಗದೆ ನಿರಾಸೆಯಿಂದ ವಾಪಸ್ಸಾಗಿದ್ದು ಒಂದೆಡೆಯಾದ್ರೆ, ಮತ್ತೊಂದೆಡೆ ಮಗ ಮಾಡಿದ ಸಾಲ ತೀರಿಸಿಕೊಡಿ ಅಂತ ಸಿಎಂ ಭೇಟಿಗೆ ಬಂದ ಮಹಿಳೆ ಸಿಎಂಗೆ ರೆಸಾರ್ಟ್ ಮುಂದೆ ಕಾದು ವಾಪಸ್ಸಾದ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ಮಡಿಕೇರಿ ನಗರದ ಹೊರಭಾಗದಲ್ಲಿರೋ ಇಬ್ಬನಿ ರೆಸಾರ್ಟ್‌ನಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಕುಟುಂಬದ ರೆಸಾರ್ಟ್ ವಾಸ್ತವ್ಯ ಎರಡನೆಯ ದಿನಕ್ಕೆ ಕಾಲಿಟ್ಟಿದೆ. ಮುಂಜಾನೆ ಎದ್ದು ರೆಸಾರ್ಟ್‌ನ ಪರಿಸರದಲ್ಲಿ ವಾಕಿಂಗ್ ಮಾಡಿದ್ದು ಬಿಟ್ರೆ ಇನ್ನುಳಿದಂತೆ ಸಿಎಂ ಬಗ್ಗೆ ಯಾವುದೇ ಮಾಹಿತಿ ಸಿಗ್ತಿಲ್ಲ. ಅಷ್ಟೊಂದು ಖಾಸಗೀತನ ಕಾಪಾಡಿಕೊಂಡು ಸಿಎಂ ವಾಸ್ತವ್ಯ ಹೂಡಿದ್ದಾರೆ. ಸಿಎಂ ರೆಸಾರ್ಟ್‌ನಲ್ಲಿ ವಿಶ್ರಾಂತಿ ಮಾಡ್ತಿದ್ರೆ ಸಿಎಂ ಜೊತೆಗೆ ಆಗಮಿಸಿದ್ದ ಸಚಿವ ಸಾರಾ ಮಹೇಶ್ ಸಿಎಂ ಸೂಚನೆಯಂತೆ ಚುನಾವಣಾ ಆಯೋಗದ ಅನುಮತಿ ಪಡೆದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊಡಗು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಜನರಿಗೆ ಆದಷ್ಟೂ ಬೇಗ ಸೂರು ಕಲ್ಪಿಸುವ ಭರವಸೆ ನೀಡಿದ್ದಾರೆ.
ಇದಕ್ಕೂ ಮುನ್ನ ರೆಸಾರ್ಟ್ ಬಳಿ ಮಾತನಾಡಿದ ಸಾ ರಾ ಮಹೇಶ್, ಸಿಎಂ ಖಾಸಗಿ ರೆಸಾರ್ಟ್ ವಾಸ್ತವ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಮನುಷ್ಯ ಪ್ರಾಣಿಗಳಂತೆ ಎಲ್ಲರಿಗೂ ಖಾಸಗಿ ಬದುಕು ಹಾಗೂ ರೆಸ್ಟ್ ಆಗತ್ಯವಿರುತ್ತೆ ಅದನ್ನು ಸಿಎಂ ಮಾಡ್ತಿದ್ದಾರೆ ಅಷ್ಟೇ. ಇನ್ನು ಕೊಡಗಿನಲ್ಲಿ ಸಿದ್ದರಾಮಯ್ಯ ಉಳಿದುಕೊಂಡಿದ್ದ ರೆಸಾರ್ಟ್‌ಗೆ ಕುಮಾರಸ್ವಾಮಿ ಬಂದಿದ್ದು ಕೊಡಗು ಸೇಫ್ ಎಲ್ಲರೂ ಇತ್ತ ಬರಬಹುದು ಎಂಬ ಸಂದೇಶ ಸಾರಲು ಅಂತ ಸಮರ್ಥನೆಯ ಮಾತನಾಡಿದ್ದಾರೆ.
ಇದೇ ಸಂದರ್ಬದಲ್ಲಿ ಮೇ ೨೩ರ ಬಳಿಕ ಸರ್ಕಾರ ಬದಲಾಗುತ್ತೆ ಅಂದಿದ್ದ ಯಡಿಯೂರಪ್ಪ ಹೇಳಿಕೆಗೆ ಟಾಂಗ್ ನೀಡಿರೋ ಸಾ ರಾ ಮಹೇಶ್ ಯಡಿಯೂರಪ್ಪ ಹೇಳಿರೋದು ಮೇ ೨೩ರ ನಂತ್ರ ಕೇಂದ್ರದ ಸರ್ಕಾರ ಬದಲಾಗುತ್ತೆ ಅಂತ ತಿರುಗೇಟು ನೀಡಿದ್ದಾರೆ. ಇನ್ನೂ ಸಂಜೆ ಸಿಎಂ ರೆಸ್ಟ್ ಮಾಡ್ತಿರೋ ರೆಸಾರ್ಟ್‌ಗೆ ಸಂಜೆ ವೇಳೆಗೆ ಸಚಿವ ಸಿಎಸ್ ಪುಟ್ಟರಾಜು ಬಂದು ಸೇರಿದ್ದಾರೆ. ಸಿಎಂ ಟೆಂಪಲ್ ರನ್ ರಾಜ್ಯದ ಜನರ ಏಳಿಗೆಗಾಗಿ, ಇಲ್ಲಿಗೆ ಅವರು ಬರೋದು ಮೊದಲೆ ಫಿಕ್ಸ್ ಆಗಿತ್ತು, ಅವರಿಗೂ ಖಾಸಗಿತನ ಇರುತ್ತೆ ಅಂತ ಪುಟ್ಟರಾಜು ಸಿಎಂ ರೆಸಾರ್ಟ್ ವಿಶ್ರಾಂತಿ ಹಾಗೂ ಟೆಂಪಲ್ ರನ್ ಅನ್ನು ಸಮರ್ಥಿಸಿಕೊಂಡ್ರು. ನಾಳೆ ರೆಸಾರ್ಟ್ ನಿಂದ ಹೊರಡಲಿರೋ ಸಿಎಂ ಮಂಡ್ಯದ ಬೀಗರೂಟಕ್ಕೆ ತೆರಳುತ್ತಾರೆ ಅಂತ ಪುಟ್ಟರಾಜು ಹೇಳಿದ್ರು. ಇನ್ನು ಯಡಿಯೂರಪ್ಪ ಹೇಳಿಕೆ ಬಗ್ಗೆ ಮಾತನಾಡಿದ ಸಿಎಸ್ ಪುಟ್ಟರಾಜು, ಯಡಿಯೂರಪ್ಪ ಅವರು ಹಾಗೂ ಅವರ ಮಗನ ಪರಿಸ್ಥಿತಿ ಮೊದಲು ತಿಳಿಯಲಿ ಅಂತ ಹೇಳಿದ್ರು.
ರೆಸಾರ್ಟ್‌ನಿಂದ ಹೊರಬರದೇ ಅತ್ತ ಸಿಎಂ ರೆಸಾರ್ಟ್ ಒಳಗೆ ರೆಸ್ಟ್‌ನಲ್ಲಿದ್ರೆ ಇತ್ತ ರೆಸಾರ್ಟ್ ಹೊರಗೆ ಮಗ ಮಾಡಿದ ಸಾಲ ತೀರಿಸಿ ಬದುಕೋಕೆ ಅವಕಾಶ ಮಾಡಿಕೊಡಿ ಅಂತ ಕೊಡಗಿನ ಮಹಿಳೆಯೊಬ್ಬರು ಸಿಎಂಗಾಗಿ ಕಾದ ಘಟನೆ ನಡೆದಿದೆ. ಸಿಎಂ ರೆಸಾರ್ಟ್‌ನಲ್ಲಿರೋ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲೆಯ ಗೋಣಿಕೊಪ್ಪದಿಂದ ರೆಸಾರ್ಟ್ ಬಳಿ ಆಗಮಿಸಿದ ಮಹಿಳೆ ಕೈರುನ್ನಿಸಾ ಸಿಎಂ ಸರ್ ನನ್ನ ಮಗನ ಸಾಲ ಮನ್ನಾ ಮಾಡಿಕೊಡಿ ಪ್ಲೀಸ್ ಅಂತ ಮನವಿ ಮಾಡೋಕೆ ರೆಸಾರ್ಟ್ ಬಳಿ ಬಂದಿದ್ರು. ಗೋಣಿಕೊಪ್ಪದಲ್ಲಿ ಬಟ್ಟೆ ಅಂಗಡಿ ಇಡಲು ಬ್ಯಾಂಕ್‌ನಿಂದ ೨ ಲಕ್ಷ ಸಾಲ ಮಾಡಿ ಸಾಲ ಕಟ್ಟೋಕೆ ಆಗದೆ ಮಗ ಮನೆ ತೊರೆದಿರೋದ್ರಿಂದ ನಾನೊಬ್ಬಳೆ ಮನೆಯಲ್ಲಿದ್ದೇನೆ. ದಯವಿಟ್ಟು ನನ್ನ ಮಗ ಮಾಡಿದ ಸಾಲ ತೀರಿಸಿ ನನ್ನನ್ನು ಋಣ ಮುಕ್ತ ಮಾಡಿ, ಇಲ್ಲಿಗೆ ಬರಲು ಬಸ್ಸಿಗೆ ದುಡ್ಡು ಇಲ್ಲದೆ ಸಾಲ ಮಾಡ್ಕೊಂಡು ಬಂದಿದೀನಿ ಅಂತ ಹೇಳ್ಕೊಂಡು ಬೆಳಗ್ಗಿನಿಂದ ಮದ್ಯಾಹ್ನದವರೆಗೂ ಸಿಎಂಗಾಗಿ ಕಾದು ಸಿಎಂ ದರ್ಶನ ಸಿಗದೆ ಬರಿಗೈಯಲ್ಲಿ ಮಹಿಳೆ ವಾಪಸ್ಸಾದ್ರು. ಇದೇ ವೇಳೆ ಸಿಎಂ ಭೇಟಿಗೆ ಬಂದ ಜೆಡಿಎಸ್ ಕಾರ್ಯಕರ್ತರಿಗೂ ಸಿಎಂ ಮುಖದರ್ಶನ ಸಿಗದೆ ಅವರೂ ಕೂಡ ನಿರಾಸೆಯಿಂದ ವಾಪಸ್ಸಾದ್ರು.
ಎಲೆಕ್ಷನ್ ಟೆಕ್ಷನ್‌ನಿಂದ ಹೊರಬರೋಕೆ ಅಂತ ಸಿಎಂ ಸರಣಿಯಾಗಿ ರೆಸಾರ್ಟ್‌ಗಳಲ್ಲೇ ವಾಸ್ತವ್ಯ ಮುಂದುವರೆಸಿದ್ದಾರೆ. ಜಿಲ್ಲೆಗೆ ಸಿಎಂ ಬಂದ್ರೂ ಜಿಲ್ಲೆಯ ಜನ ಹಾಗೂ ಕಾರ್ಯಕರ್ತರಿಗೆ ಸಿಎಂ ಮುಖದರ್ಶನ ಸಿಗದೆ ಅವರೆಲ್ಲಾ ನಿರಾಸೆಯಾಗಿ ವಾಪಸ್ಸಾಗ್ತಿದಾರೆ. ಸದ್ಯ ಕೊಡಗಿನ ಪ್ರಕೃತಿಕ ಮಡಿಲಲ್ಲಿರೋ ರೆಸಾರ್ಟ್‌ನಲ್ಲಿ ಕುಟುಂಬ ಸಮೇತರಾಗಿ ವಾಸ್ತವ್ಯ ಹೂಡಿರೋ ಸಿಎಂ ನಾಳೆ ಇಲ್ಲಿಂದ ಚೆಕ್ ಔಟ್ ಆಗಲಿದ್ದಾರೆ.

- ಕೆ.ಸಿ.ಮಣಿಕಂಠ,ಈಟಿವಿ ಭಾರತ, ಹಾಸನ.Body:0Conclusion:0
Last Updated : May 12, 2019, 12:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.