ETV Bharat / state

ಕೊಡಗು ಸೈನಿಕ ಶಾಲೆಯಲ್ಲಿ ವಾರ್ಡ್​​ ಬಾಯ್​ ಮತ್ತು ಸಮಾಲೋಚಕರ ಹುದ್ದೆ; ಇಲ್ಲಿದೆ ಮಾಹಿತಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ, ನೇಮಕಾತಿ, ವೇತನ ಸೇರಿದಂತೆ ಇನ್ನಿತರ ಮಾಹಿತಿಗಳು ಇಲ್ಲಿದೆ.

Sainik School Kodagu Recruitment  for ward boy and Counsellor

author img

By

Published : Jun 14, 2023, 2:09 PM IST

ಕೇಂದ್ರದ ರಕ್ಷಣ ಇಲಾಖೆಯ ಕೊಡಗು ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಾರ್ಡ್​​ ಬಾಯ್​ ಮತ್ತು ಕೌನ್ಸೆಲರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 6 ವಾರ್ಡ್​ ಬಾಯ್​ ಮತ್ತು ಒಬ್ಬರು ಸಮಾಲೋಚಕರ ಆಯ್ಕೆ ನಡೆಸಲಾಗುವುದು. ಮೆಟ್ರಿಕ್ಯೂಲೆಷನ್​ ಮತ್ತು ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ.

ಹುದ್ದೆ ವಿವರ: ವಾರ್ಡ್​​ ಬಾಯ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯೂಲೇಷನ್​ ಪಾಸ್​ ಆಗಿರಬೇಕು. ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿದ್ದಲ್ಲಿ ಅದು ಪ್ರಯೋಜವಾಗಲಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೋರ್ಸ್​ ಅಥವಾ ಇತರೆ ಸರ್ಕಾರಿ ಪ್ರಯೋಜಿತ ಸಂಸ್ಥೆಗಳಿಂದ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಎರಡರಿಂದ ಮೂರು ವರ್ಷ ಅನುಭವ ಹೊಂದಿರಬೇಕಾಗಿದೆ.

ಅಧಿಸೂಚನೆ
ಅಧಿಸೂಚನೆ

ಸಮಾಲೋಚಕರು: ಸೈಕಾಲಾಜಿ ಅಥವಾ ಮಕ್ಕಳ ಅಭಿವೃದ್ಧಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಆಂಗ್ಲ ಮಾಧ್ಯಮದಲ್ಲಿ ಸಮಾಲೋಚನೆ ನೀಡುವ ಅನುಭವ ಹೊಂದಿರಬೇಕು

ವಯೋಮಿತಿ: ವಾರ್ಡ್​ಬಾಯ್​​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 50 ವರ್ಷ ವಯೋಮಾನ ಹೊಂದಿರಬೇಕು. ಸಮಾಲೋಚಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 35 ವರ್ಷ ವಯೋಮಿತಿ ಹೊಂದಿರಬೇಕು.

ವೇತನ: ವಾರ್ಡ್​ ಬಾಯ್​ ಹುದ್ದೆಗಳಿಗೆ 17,600 ರೂ. ವೇತನ ಮತ್ತು ಸಮಾಲೋಚಕರಿಗೆ 34,100 ರೂ. ವೇತನ ನಿಗದಿಸಲಾಗಿದೆ.

ಅರ್ಜಿ ಸಲ್ಲಿಕೆ ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಪೋಸ್ಟಲ್​ ಚಾರ್ಜ್​ 25 ರೂ ಸಲ್ಲಿಕೆ ಮಾಡಬೇಕು. ಜೊತೆಗೆ ಮೀಸಲಾತಿ ರಹಿತ ಮತ್ತು ಒಬಿಸಿ ಅಭ್ಯರ್ಥಿಗಳು 400 ರೂ. ಶುಲ್ಕವನ್ನು ಡಿಮ್ಯಾಂಡ್​ ಡ್ರಾಫ್ಟ್​ ಮೂಲಕ ಸಲ್ಲಿಕೆ ಮಾಡಬೇಕಿದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ ವಿಳಾಸ: ಪ್ರಿನ್ಸಿಪಾಲ್​, ಸೈನಿಕ್​ ಸ್ಕೂಲ್​ ಕೊಡಗು, ಅಂಚೆ ಕಚೇರಿ; ಕುಡಿಗೆ, ಕುಶಾಲನಗರ ತಾಲೂಕು, ಜಿಲ್ಲೆ. ಕೊಡಗು, ಕರ್ನಾಟಕ. ಪಿನ್​ 571232ಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಅಧಿಕೃತ ಅಧಿಸೂಚನೆ ಜೊತೆಯಲ್ಲಿಯೇ ನಿಗದಿತ ಅರ್ಜಿ ಸಲ್ಲಿಕೆ ಫಾರಂ ಅನ್ನು ನೀಡಲಾಗಿದೆ. ಈ ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳ ಮೂಲಕ ಮೇಲೆ ತಿಳಿಸಿದ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಜೂನ್​ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 26 ಆಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು sainikschoolkodagu.edu.in ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ವಾಯುಪಡೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆ..? ಇಲ್ಲಿದೆ ಅದಕ್ಕೆ ಮಾರ್ಗ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.