ETV Bharat / state

ಆರೋಗ್ಯ ಕೇಂದ್ರದಲ್ಲಿ ನೂಕು ನುಗ್ಗಲು: ಸ್ಥಳೀಯರು - ಟೆಕ್ನಿಷಿಯನ್‌ಗಳ ನಡುವೆ ವಾಗ್ವಾದ! - ಗಂಟಲು ದ್ರವ ಪರೀಕ್ಷೆ

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆತಂಕಗೊಂಡ ಸ್ಥಳೀಯರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆಗೆ ತೆರಳಿದ್ದಾಗ ಜನ ಜಂಗುಳಿ ಏರ್ಪಟ್ಟಿದೆ.‌

discussion
discussion
author img

By

Published : Jun 26, 2020, 10:31 AM IST

ಕುಶಾಲನಗರ(ಕೊಡಗು): ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆಗೆ ಜನತೆ ಮುಗಿ ಬಿದ್ದಿದ್ದಾರೆ.

ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರದಲ್ಲಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಆತಂಕಗೊಂಡ ಸ್ಥಳೀಯರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆಗೆ ತೆರಳಿದ್ದಾಗ ಜನ ಜಂಗುಳಿ ಏರ್ಪಟ್ಟಿದೆ.‌

ಆರೋಗ್ಯ ಕೇಂದ್ರದಲ್ಲಿ ನೂಕು ನುಗ್ಗಲು

ತಪಾಸಣೆಗೆ ಹೋಗಿದ್ದ ಸಂದರ್ಭ ಹೊರ ರೋಗಿ ಸಮಸ್ಯೆ ಹಾಗೂ ಸಿಬ್ಬಂದಿ‌ ವಿಳಂಬ ಧೋರಣೆಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲಕಾಲ ನೂಕು ನುಗ್ಗಲು ಉಂಟಾಗಿದ್ದರಿಂದ ಸಾರ್ವಜನಿಕರು ಮತ್ತು ಟೆಕ್ನಿಷಿಯನ್‌ಗಳ ನಡುವೆ ವಾಗ್ವಾದ ನಡೆದಿವೆ.

ಅಲ್ಲದೇ ಗಂಟಲು ದ್ರವ ಪರೀಕ್ಷಿಸಲು ನಿರಾಕರಿಸಿದ ತಂತ್ರಜ್ಞರ ವಿರುದ್ಧವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಏಕಾಏಕಿ 50 ಜನರು ಆರೋಗ್ಯ ಕೇಂದ್ರಕ್ಕೆ ತೆರಳಿದ್ದರಿಂದ ಹೀಗೆ ಆಗಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.