ಕೊಡಗು: ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಮನೆ ಮಾಲೀಕನೊಬ್ಬ ಮನೆಯಲ್ಲಿ ಯಾರೂ ಇಲ್ಲದಿರುವಾಗ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮದ ಜಮಾತ್ ಅಧ್ಯಕ್ಷ ಕೆ.ಎಸ್.ಖಾದರ್ ಹಾಜಿ ಎಂಬಾತನ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ಖಾದರ್ನ ಹೆಂಡತಿ ಮನೆಯಲ್ಲಿ ಬಾಡಿಗೆ ಇದ್ದ ಮಹಿಳೆಗೆ ಗಂಡನಿಗೆ ಊಟ ಕೊಡುವಂತೆ ಹೇಳಿದ್ದಾರೆ.
ಅಂದರಂತೆ ಊಟ ಕೊಡಲು ಹೋದ ಸಂದರ್ಭದಲ್ಲಿ ಖಾದರ್ ಆಕೆಯ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.