ETV Bharat / state

ಕೊಡಗು: ನರಭಕ್ಷಕ ಹುಲಿ ಸೆರೆಹಿಡಿಯುವಂತೆ ರಸ್ತೆ ತಡೆದು ಪ್ರತಿಭಟನೆ

ಕೊಡಗಿನಲ್ಲಿ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಂತೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

protest in kodagu
ಹುಲಿ ಸೆರೆಗೆ ಒತ್ತಾಯ
author img

By

Published : Mar 15, 2021, 2:22 PM IST

ಕೊಡಗು: ಮೂವರನ್ನು ಬಲಿ ಪಡೆದು 10ಕ್ಕೂ ಹೆಚ್ಚು ಹಸುಗಳನ್ನು ಕೊಂದು ಹಾಕಿರುವ ನರ ಭಕ್ಷಕ ಹುಲಿ ‌ಸೆರೆಗೆ ಒತ್ತಾಯಿಸಿ ಜಿಲ್ಲಾ ರೈತ ಸಂಘ ಹಾಗೂ ಮೈಸೂರು - ಮಂಡ್ಯ ರೈತ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿವೆ.

ಹುಲಿ ಸೆರೆಗೆ ಒತ್ತಾಯ

ಹುಲಿ ಹಿಡಿಯಲು 22 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ನರಭಕ್ಷಕ ಇನ್ನೂ ಸೆರೆಯಾಗಿಲ್ಲ. ಈ ಹಿನ್ನೆಲೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆದು ನೂರಾರು ರೈತರು ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊನ್ನಪೇಟೆ ಭಾಗದಲ್ಲಿ ಹುಲಿ ದಾಳಿ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಭಯಬೀತರಾಗಿದ್ದ ಪೊನ್ನಪೇಟೆ ಭಾಗದ ಜನ ಸಂಜೆ 6 ಗಂಟೆಗೆ ಗ್ರಾಮಗಳನ್ನು ಬಂದ್ ಮಾಡುತ್ತಿದ್ದಾರೆ. ನರಭಕ್ಷಕ ಹುಲಿ ಸೆರೆಹಿಡಿದು ಕಾಡು ಪ್ರಾಣಿಗಳಿಂದ ಶಾಶ್ವತ ಪರಿಹಾರ ನೀಡುವಂತೆ ಪ್ರತಿಭಟಕಾರರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.