ETV Bharat / state

ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್​​​​

ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಹುಟ್ಟಿದ ಮನೆ 'ಸನ್ನಿಸೈಡ್' ಅನ್ನು ಈಗ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದ್ದು, ತಿಮ್ಮಯ್ಯ ಅವರ ಬಾಲ್ಯದಿಂದ ಸೇನಾ ಬದುಕಿನವರೆಗೆ ಅನೇಕ ಘಟನೆಗಳು, ಭಾರತೀಯ ಸೇನಾಪಡೆಯ ಮಹತ್ವ ಹಾಗೂ ಯುದ್ಧ ಸ್ಮಾರಕಗಳನ್ನು ಅವರು ಈ ವಸ್ತು ಸಂಗ್ರಹಾಲಯದಲ್ಲಿ ವೀಕ್ಷಿಸಿದರು.

President Ramanath Kovind,
ರಾಷ್ಟ್ರಪತಿ ರಾಮನಾಥ್ ಕೋವಿಂದ್
author img

By

Published : Feb 6, 2021, 6:42 PM IST

ಮಡಿಕೇರಿ (ಕೊಡಗು): ಸೇನಾಪಡೆಯ ಮುಖ್ಯಸ್ಥರಾಗಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಸೇನಾ ಸಾಹಸಗಾಥೆ ಬಿಂಬಿಸುವ 'ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ'ವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆಗೊಳಿಸಿದ್ದಾರೆ.

President who visited the KS Thimmayya Museum
ಕೆ.ಎಸ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ವೀಕ್ಷಿಸಿದ ರಾಷ್ಟ್ರಪತಿ

ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಹುಟ್ಟಿದ ಮನೆ 'ಸನ್ನಿಸೈಡ್' ಅನ್ನು ಈಗ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದ್ದು, ತಿಮ್ಮಯ್ಯ ಅವರ ಬಾಲ್ಯದಿಂದ ಸೇನಾ ಬದುಕಿನವರೆಗೆ ಅನೇಕ ಘಟನೆಗಳು, ಭಾರತೀಯ ಸೇನಾಪಡೆಯ ಮಹತ್ವ, ಹಾಗೂ ಯುದ್ಧ ಸ್ಮಾರಕಗಳನ್ನು ಅವರು ಈ ವಸ್ತು ಸಂಗ್ರಹಾಲಯದಲ್ಲಿ ವೀಕ್ಷಿಸಿದರು.

ಕೆ.ಎಸ್. ತಿಮ್ಮಯ್ಯ ಅವರ ಸೇನಾ ಸಮವಸ್ತ್ರ, ತಿಮ್ಮಯ್ಯ ಅವರು ಅವರ ತಾತನೊಂದಿಗೆ ಸನ್ನಿಸೈಡ್‌ನಲ್ಲಿ ಮಲಗುತ್ತಿದ್ದ ಗತಕಾಲದ ನೆನಪು ತರುವ ಹಾಸಿಗೆ, ಮಿನಿ ರಾಕೆಟ್ ಲಾಂಚರ್, ಯುದ್ಧದಲ್ಲಿ ಬಳಸಲಾಗುತ್ತಿದ್ದ ಬಂದೂಕುಗಳು ಮುಂತಾದವನ್ನು ವೀಕ್ಷಿಸಿದರು.

ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ಗೌರವಾನ್ವಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಕರ್ಷಕವಾಗಿ ನಿರ್ಮಿಸಿರುವ ಯುದ್ಧ ಟ್ಯಾಂಕರ್, ಯುದ್ಧ ವಿಮಾನ ಮುಂತಾದ ರಕ್ಷಣಾ ಪಡೆಯ ಸ್ಮಾರಕಗಳನ್ನು ಅವಲೋಕಿಸಿದರು.

ಪ್ರಥಮ ಮಹಿಳೆ ಶ್ರೀಮತಿ ಸವಿತಾ ಕೋವಿಂದ್, ಸೇನಾಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ, ಶಾಸಕರಾದ ಅಪ್ಪಚ್ಚು ರಂಜನ್ ಸೇರಿ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಕೇಂದ್ರೀಕರಣ ಯೋಜನೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಕ್ರಮ: ಸಿಎಂ ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.