ETV Bharat / state

ಗುಂಬಜ್​ ಮೇಲೆ ಕಳಶ ಇಟ್ಟರೆ ಅದಕ್ಕೆ ಯಾವ ಅರ್ಥನೂ ಇಲ್ಲ : ಪ್ರತಾಪ್​ ಸಿಂಹ - ಟಿಪ್ಪುಗೂ ಮೈಸೂರಿಗೂ ಸಂಬಂಧವಿಲ್ಲ

ಬೆಂಗಳೂರು ಕೆಂಪೇಗೌಡರ ದೂರದೃಷ್ಟಿಯ ಫಲದಿಂದ ನಿರ್ಮಾಣವಾಗಿದೆ. ಅದಕ್ಕೆ ಅವರ ಪ್ರತಿಮೆ ಮಾಡಲಾಗಿದೆ. ಆದರೆ ಟಿಪ್ಪುಗೂ ಮೈಸೂರಿಗೂ ಸಂಬಂಧವಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

Etv Bharat
ಪ್ರತಾಪ್​ ಸಿಂಹ
author img

By

Published : Nov 15, 2022, 4:19 PM IST

ಕೊಡಗು: ಗುಂಬಜ್​ ಮೇಲೆ ಕಳಶ ಇಟ್ಟರೆ ಅದಕ್ಕೆ ಯಾವ ಅರ್ಥನೂ ಇಲ್ಲ. ಊಟಿ ರಸ್ತೆಯ ಬಸ್ ನಿಲ್ದಾಣದಲ್ಲಿ ಇರುವುದು ಯಾವುದೇ ಹೆರಿಟೇಜ್ ಅಲ್ಲ. ಗುಂಬಜ್​ ಮೇಲ್ಭಾಗದಲ್ಲಿ ಅರ್ಧ ಚಂದ್ರ ಇಟ್ಟರೆ ಅದು ಮಸೀದಿನೇ ಆಗುತ್ತದೆ. ಈ ಬಗ್ಗೆ ಆಕ್ಷೇಪವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಎತ್ತಿದ್ದಾರೆ. ಜನರ ಅಭಿಪ್ರಾಯವನ್ನೇ ನಾನು ಹೇಳಿದ್ದೇನೆ ಎಂದು ಸಂಸದ ಪ್ರತಾಪ್​ ಸಿಂಹ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಮಡಿಕೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕು ದಿನಗಳಲ್ಲಿ ಗುಂಬಜ್​ ಕೆಡವಲು ಸೂಚನೆ ನೀಡಿದ್ದೇನೆ. ತಪ್ಪಿದಲ್ಲಿ ನಾವೇ ಗುಂಬಜ್​ ಕೆಡವುತ್ತೇವೆ. ಮತ್ತೊಮ್ಮೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಕೇಸರಿ ತ್ಯಾಗದ ಸಂಕೇತ: ಭಾರತದ ತ್ರಿವರ್ಣ ಧ್ವಜದಲ್ಲೇ ಕೇಸರಿ ಬಣ್ಣ ಇದೆ. ಕೇಸರಿ ಎಂಬುದು ತ್ಯಾಗ ಬಲಿದಾನದ ಸಂಕೇತ. ಕೇಸರಿಕರಣದಲ್ಲೂ ಹುಳುಕು ಹುಡುಕುತ್ತಿದ್ದಾರೆ. ಅದು ಅವರ ಮನದ ಕಲ್ಮಶವನ್ನು ತೋರುತ್ತದೆ ಎಂದು ಸಂಸದ ಪ್ರತಾಪ್​ ಸಿಂಹ ಟಾಂಗ್​ ಕೊಟ್ಟರು.

ಟಿಪ್ಪುವಿಗೂ ಮೈಸೂರಿಗೂ ಸಂಬಂಧ ಇಲ್ಲ: ಮೈಸೂರಿನಲ್ಲಿ ಕೇವಲ ಮಹಾರಾಜರು ಮಾತ್ರ ಇರಬೇಕು. ಬೇರೆ ಯಾರ ಪ್ರತಿಮೆಗೂ ಅವಕಾಶವಿಲ್ಲ. ಬೆಂಗಳೂರು ಕೆಂಪೇಗೌಡರ ದೂರದೃಷ್ಟಿಯ ಫಲದಿಂದ ನಿರ್ಮಾಣವಾಗಿದೆ. ಅದಕ್ಕೆ ಅವರ ಪ್ರತಿಮೆ ಮಾಡಲಾಗಿದೆ. ಆದರೆ ಟಿಪ್ಪುಗೂ ಮೈಸೂರಿಗೂ ಸಂಬಂಧವಿಲ್ಲ. ಟಿಪ್ಪುವಿನ ಆಡಳಿತ ಕೇಂದ್ರವಾಗಿತ್ತು ಅಷ್ಟೇ, ಕೊಡಗರ ಕಗ್ಗೊಲೆ ಮಾಡಿದ್ದಕ್ಕಾಗಿ ಅವನ ಪ್ರತಿಮೆ ಮಾಡಬೇಕಾ ಎಂದು ಪ್ರಶ್ನಿಸಿದರು.

ಗುಂಬಜ್​ ಮೇಲೆ ಕಳಶ ಇಟ್ಟರೆ ಅದಕ್ಕೆ ಯಾವ ಅರ್ಥನೂ ಇಲ್ಲ: ಸಂಸದ ಪ್ರತಾಪ್​ ಸಿಂಹ

ಕನ್ನಡದ ಕಗ್ಗೊಲೆ ಮಾಡಿದವನ ಪ್ರತಿಮೆ ಮಾಡುತ್ತೀರಾ : ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡುವುದು ಒಂದೇ, ಅರಣ್ಯ ಇಲಾಖೆ ವೀರಪ್ಪನ್​ ಜಯಂತಿ ಮಾಡುವುದು ಒಂದೇ. ಟಿಪ್ಪು ಆಡಳಿತ ಭಾಷೆಯನ್ನು ಪರ್ಷಿಯನ್​ ಮಾಡಿ ಕನ್ನಡವನ್ನು ಕಗ್ಗೊಲೆ ಮಾಡಿದ್ದರು. ಈಗ ಕಂದಾಯ ಇಲಾಖೆಯಲ್ಲಿ ಬಳಕೆಯಲ್ಲಿರುವ ತರಿ, ಖುಷ್ಕಿ, ಬಗರ್​ಹುಕುಂ ಪದ ಬಳಕೆಗೆ ಅವರೇ ಕಾರಣ. ತನ್ವೀರ್ ಸೇಠ್ ಅವರು ಟಿಪ್ಪು ಪ್ರತಿಮೆ ಮಾಡುವ ಬದಲು ಅಬ್ದುಲ್ ನಜೀರ್ ಸಾಬ್​, ಅಬ್ದುಲ್ ಕಲಾಂ ಅವರ ಪ್ರತಿಮೆ ಮಾಡಲಿ, ಆಗ ಜನರು ಒಪ್ಪುತ್ತಾರೆ ಎಂದರು.

ಇದನ್ನೂ ಓದಿ : ಬಸ್​ ನಿಲ್ದಾಣದ ಗುಂಬಜ್​ಗಳನ್ನು ನಾನೇ ಜೆಸಿಬಿಯಿಂದ ಒಡೆದು ಹಾಕುತ್ತೇನೆ: ಸಂಸದ ಪ್ರತಾಪ್ ಸಿಂಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.