ETV Bharat / state

ಮಸೀದಿ ಧ್ವನಿವರ್ಧಕ ವಿವಾದ : ರಾಜ್ಯ ಸರ್ಕಾರದ ಆದೇಶದಂತೆ ಕ್ರಮಕೈಗೊಳ್ಳಲು ಜಿಲ್ಲಾಡಳಿತ ನಿರ್ಧಾರ - restrictions on using the mics in public places by kodagu DC

ಮಸೀದಿ ಧ್ವನಿವರ್ಧಕದ ವಿವಾದದ ಹಿನ್ನೆಲೆ ಕೊಡಗು ಜಿಲ್ಲಾಡಳಿತ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ, ಇತರ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ಪಡೆಯುವಂತೆ ಸೂಚಿಸಿದೆ. ಮಾತ್ರವಲ್ಲ ಈ ನಿಟ್ಟಿನಲ್ಲಿ ಮೇ 25ರ ಒಳಗೆ ಅರ್ಜಿ ಸಲ್ಲಿಸುವಂತೆ ಗಡುವು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು ಹೇಳಿದ್ದಾರೆ..

permission-will-be-taken-for-using-mics-in-public-places-says-kodagu-dc
ಮಸೀದಿ ಧ್ವನಿವರ್ಧಕ ವಿವಾದ : ರಾಜ್ಯ ಸರ್ಕಾರದ ಆದೇಶದಂತೆ ಕ್ರಮಕೈಗೊಳ್ಳಲು ಜಿಲ್ಲಾಡಳಿತ ನಿರ್ಧಾರ
author img

By

Published : May 25, 2022, 3:49 PM IST

ಕೊಡಗು : ಇಡೀ ದೇಶಾದ್ಯಂತ ಕಿಚ್ಚು ಹೊತ್ತಿಸಿರುವ ಮಸೀದಿ ಧ್ವನಿವರ್ಧಕ ವಿವಾದವನ್ನು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ತಮ್ಮದೇ ಆದ ರೀತಿಯಲ್ಲಿ ಬಗೆಹರಿಸಲು ಮುಂದಾಗಿದ್ದಾರೆ. ಕಾನೂನು ಪಾಲನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿ ಶಬ್ದ ಮಾಲಿನ್ಯ ಮಾಡದೆ ಧಾರ್ಮಿಕ ಆಚರಣೆಗೆ ಅನುಕೂಲ ಕಲ್ಪಿಸುವತ್ತ ಚಿತ್ತ ಹರಿಸಿದ್ದಾರೆ.

ಮಸೀದಿಗಳಲ್ಲಿ ಮೊಳಗುವ ಆಜಾನ್ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ಬೀದಿಗಿಳಿದಿದ್ದು ವಿವಾದ ತಾರಕಕ್ಕೇರಿದೆ. ಆಜಾನ್‌ಗೆ ಪ್ರತಿಯಾಗಿ ದೇವಸ್ಥಾನಗಳಲ್ಲಿ ಸುಪ್ರಭಾತ ಮೊಳಗಿಸಿ ಪ್ರತಿಭಟನೆ ನಡೆಸಲಾಗಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ 2002ರ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.

ಮಸೀದಿ ಧ್ವನಿವರ್ಧಕ ವಿವಾದ, ರಾಜ್ಯ ಸರ್ಕಾರದ ಆದೇಶದಂತೆ ಕ್ರಮಕೈಗೊಳ್ಳಲು ಜಿಲ್ಲಾಡಳಿತ ನಿರ್ಧಾರ

2002ರ ರಾಜ್ಯ ಸರ್ಕಾರದ ಆದೇಶದ ಆಧಾರದ ಮೇಲೆ ಕಾನೂನು ಜಾರಿಗೆ ಮುಂದಾಗಿದ್ದು, ಧ್ವನಿವರ್ಧಕಗಳ ಶಬ್ದ ಸರ್ಕಾರ ನಿಗದಿ ಮಾಡಿದ ಪ್ರಮಾಣಕ್ಕಿಂತ ಹೆಚ್ಚಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಅದರಂತೆ ಇದೀಗ ಕೊಡಗು ಜಿಲ್ಲಾಡಳಿತ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ, ಇತರೆ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯುವಂತೆ ಸೂಚಿಸಿದೆ. ಮಾತ್ರವಲ್ಲ ಈ ನಿಟ್ಟಿನಲ್ಲಿ ಮೇ 25ರ ಒಳಗೆ ಅರ್ಜಿ ಸಲ್ಲಿಸುವಂತೆ ಗಡುವು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು ಹೇಳಿದ್ದಾರೆ.

ಇನ್ನು ಮುಂದೆ ಧಾರ್ಮಿಕ ಕ್ಷೇತ್ರಗಳಲ್ಲಿ ಮತ್ತು ಇತರ ಎಲ್ಲಾ ಕಡೆಗಳಲ್ಲಿ ಧ್ವನಿವರ್ಧಕ ಬಳಸಲು ಪೊಲೀಸ್ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಅದೂ ಧ್ವನಿವರ್ಧಕದ ಶಬ್ದದ ಪ್ರಮಾಣ ನಿಗದಿತ ಮಾನದಂಡದಲ್ಲೇ ಇರಬೇಕು. ಹಾಗಾಗಿಯೇ, ತಕ್ಷಣವೇ ಅರ್ಜಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ವಲ್ಪ ಗೊಂದಲದಲ್ಲಿದ್ದಾರೆ. ಯಾರಿಗೆ ಅರ್ಜಿಸಲ್ಲಿಸಬೇಕು, ಏನು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ. ಅದೂ ಅಲ್ಲದೆ 2002ರ ಆದೇಶವನ್ನು ಯಥಾವತ್ತಾಗಿ ಪಾಲನೆ ಮಾಡಲು ಸೂಚನೆ ಇರುವುದರಿಂದ ಕಾನೂನಿನಲ್ಲಿ ಹೆಚ್ಚೇನು ಬದಲಾವಣೆ ಇಲ್ಲ ಎಂದು ಸ್ಥಳೀಯ ವಕೀಲ ಅಮೀನ್ ತಿಳಿಸಿದ್ದಾರೆ.

ಓದಿ : ಚಾಮರಾಜಪೇಟೆಯಲ್ಲಿ ಕೊಲೆ : ಹಣಕ್ಕಾಗಿ ಮನೆ ಮಾಲೀಕನನ್ನು ಮರ್ಡರ್​ ಮಾಡಿದ್ನಾ ಕೆಲಸಗಾರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.