ETV Bharat / state

ಪ್ರಕೃತಿ ವಿಕೋಪದ ಪರಿಹಾರ ವಿಳಂಬ.. ಅಧಿಕಾರಿಗಳು, ಸಚಿವ ಸಾರಾ ಮಹೇಶ್‌ ವಿರುದ್ಧ ಸಂತ್ರಸ್ತರ ಆಕ್ರೋಶ

ಇಂದು ಕೊಡಗು ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್‌ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ನಿರಾಶ್ರಿತರಿಗೆ ಆಶ್ರಯ ಮನೆ ನಿರ್ಮಿಸುತ್ತಿದ್ದ ತಾಲೂಕಿನ ಕರ್ಣಂಗೇರಿಗೆ ಭೇಟಿ ನೀಡಿ ಪರಿಶೀಲಿಸಿ ವಾಪಸ್ಸಾಗುತ್ತಿದ್ದ ಅಧಿಕಾರಿಗಳ ವಾಹನಗಳನ್ನು ಅಡ್ಡಗಟ್ಟಿದ ಜನರು ಜಿಲ್ಲಾಡಳಿತದ ವಿರುದ್ಧ ಗರಂ ಆದ್ರು.

ಅಧಿಕಾರಿಗಳ ವಿರುದ್ಧ ಸಂತ್ರಸ್ತರ ಆಕ್ರೋಶ
author img

By

Published : Jun 1, 2019, 11:35 PM IST

ಕೊಡಗು: ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಸಂತ್ರಸ್ತರಾದ ಜನತೆಗೆ ಸಹನೆ ಕಟ್ಟೆಯೊಡೆದಿದೆ. ಒಂದು ಮಳೆ ಮುಗಿದು ಮತ್ತೊಂದು ಮಳೆ ಆರಂಭವಾದರೂ ಮನೆ ಕಳೆದುಕೊಂಡವರಿಗೆ ಮನೆ ಸಿಕ್ಕಿಲ್ಲ. ಬೆಳೆ ನಷ್ಟ ಆದವರಿಗೆ ಅದರ ಪರಿಹಾರ ಸಿಗದೆ ಇರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳ ವಿರುದ್ಧ ಸಂತ್ರಸ್ತರ ಆಕ್ರೋಶ

ಇಂದು ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್‌ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ನಿರಾಶ್ರಿತರಿಗೆ ಆಶ್ರಯ ಮನೆ ನಿರ್ಮಿಸುತ್ತಿದ್ದ ತಾಲೂಕಿನ ಕರ್ಣಂಗೇರಿಗೆ ಭೇಟಿ ನೀಡಿ ಪರಿಶೀಲಿಸಿ ವಾಪಸ್ಸಾಗುತ್ತಿದ್ದ ಅಧಿಕಾರಿಗಳ ವಾಹನಗಳನ್ನು ಅಡ್ಡಗಟ್ಟಿದ ಜನರು ಜಿಲ್ಲಾಡಳಿತದ ವಿರುದ್ಧ ಗರಂ ಆದ್ರು. ಅಧಿಕಾರಿಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿದ ಸಂತ್ರಸ್ತರು ನೆರವು ಕೊಡುವಂತೆ ಒತ್ತಾಯಿಸಿದರು. ಸೂಕ್ತ ರೀತಿಯಲ್ಲಿ ಪರಿಹಾರ ಕೊಡಿ. ಇಲ್ಲಾ ನಾವೇನು ಅಂತಾ ತೋರಿಸ್ತೀವಿ ಅಂತಾ ತರಾಟೆಗೆ ತೆಗೆದುಕೊಂಡರು.

ಸಚಿವರು, ಡಿಸಿ, ಎಸ್ಪಿ, ಎಸಿ ಹಾಗೂ ಪೊಲೀಸ್ ವಾಹನಗಳನ್ನು ತಡೆದು ಜನರು ರಂಪಾಟ ನಡೆಸಿದರು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ‌ಸದ್ಯ ಸಂತ್ರಸ್ತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರೋ ಸಚಿವ ಸಾ ರಾ ಮಹೇಶ್ ಜೂನ್ 3ರಂದು ಡಿಸಿ ಕಚೇರಿಯಲ್ಲಿ ಎಲ್ಲಾ ಸಂತ್ರಸ್ತರ ಸಭೆ ಕರೆಯುವ ಹಾಗೂ 15 ದಿನಗಳೊಳಗೆ ಕೊಡಗಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕರೆತಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.

Intro:ಪರಿಹಾರ ವಿಳಂಬ ಅಧಿಕಾರಿಗಳ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ತರು

ಕೊಡಗು: ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ
ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಜನತೆಗೆ ಸಹನೆ ಕಟ್ಟೆಯೊಡೆದಿದೆ. ಒಂದು ಮಳೆ ಮುಗಿದು ಮತ್ತೊಂದು ಮಳೆ ಆರಂಭವಾದರೂ ಮನೆ ಕಳೆದುಕೊಂಡವರಿಗೆ ಮನೆ ಸಿಕ್ಕಿಲ್ಲ. ಬೆಳೆ ನಷ್ಟ ಆದವರಿಗೆ ಅದರ ಪರಿಹಾರ ಸಿಗದೆ ಇರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಅವರ ಸಹನೆಯ ಕಟ್ಟೆ ಇಂದು ಜಿಲ್ಲೆಗೆ ಆಗಮಿಸಿದ್ದ
ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್ ಎದುರು ವ್ಯಕ್ತವಾಯಿತು.
ಹೌದು... ಕಳೆದ ಬಾರಿ ಮಹಾಮಳೆಗೆ ನಿರಾಶ್ರಿತರಿಗೆ ಆಶ್ರಯ ಮನೆ ನಿರ್ಮಿಸುತ್ತಿದ್ದ ತಾಲೂಕಿನ ಕರ್ಣಂಗೇರಿಗೆ ಭೇಟಿ ನೀಡಿ ಪರಿಶೀಲಿಸಿ ವಾಪಸ್ಸಾಗುತ್ತಿದ್ದ ಅಧಿಕಾರಿಗಳ ವಾಹನಗಳನ್ನು ಅಡ್ಡಗಟ್ಟಿದ ಅವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಅಡ್ಡಗಟ್ಟಿದ ಸಂತ್ರಸ್ತರು ನೆರವು ಕೊಡುವಂತೆ ಒತ್ತಾಯಿಸಿದರು. ಸೂಕ್ತ ರೀತಿಯಲ್ಲಿ ಸೂಕ್ತ ಸಮಯದೊಳಗೆ ಪರಿಹಾರ ಕೊಡಿ. ಇಲ್ಲಾ ನಾವೇನು ಅಂತ ತೋರಿಸ್ತೀವಿ ಅಂತ ಸಂತ್ರಸ್ತರು ತರಾಟೆಗೆ ತೆಗೆದುಕೊಂಡರು.
ಒಂದೇ ವಾಹನ ಹೋಗುವಂತಹ ಕಿರಿದಾದ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರೋ ವಾಹನಗಳು, ಅದೂ ಅವರಿವರ ವಾಹನಗಳಲ್ಲ ಸಚಿವರು, ಡಿಸಿ, ಎಸ್ಪಿ, ಎಸಿ ಹಾಗೂ ಪೊಲೀಸ್ ವಾಹನಗಳು..!. ಎಲ್ಲಿ ನುಣಿಚಿಕೊಂಡು ಏನೇನೊ ಕಾರಣ ಕೊಟ್ಟು ಹೋಗಲು ಅವಕಾಶವೇ ಇರಲಿಲ್ಲ.ಕಿರಿದಾದ ರಸ್ತೆಯಲ್ಲಿ ಅಧಿಕಾರಿಗಳ ವಾಹನಗಳು ಹೋಗದಂತೆ ಸಂತ್ರಸ್ಥರು ಖಾಸಗಿ ವಾಹನ ಅಡ್ಡಗಟ್ಟಿದ್ದರು.ಹಾನಿಗೊಳಗಾದ ವ್ಯಾಪ್ತಿಯ ಸಂತ್ರಸ್ತರು ಪರಿಹಾರಕ್ಕೆ ಒತ್ತಾಯಿಸಿದರು.‌ಇದರಿಂದ ಸುಮಾರು ಒಂದು ತಸಿಗೂ ಹೆಚ್ವು ಸಮಯ ಸಚಿವರು ಸಂತ್ರಸ್ಥರನ್ನು ಓಲೈಕೆಯಲ್ಲೆ ಕಳೆಯಬೇಕಾಯಿತು.‌
ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟರು.
ಸಂತ್ರಸ್ತರನ್ನು ಸರಿಯಾಗಿ ವಿಶ್ವಾಸಕ್ಕೆ ಅರಿಯದೇ ಪುನರ್ವಸತಿ ಕಾರ್ಯ ಕೈಗೊಂಡಿದ್ದಕ್ಕೆ ಹಾಗೂ ಪರಿಹಾರ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ‌ಸದ್ಯ ಸಂತ್ರಸ್ತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರೋ ಸಚಿವ ಸಾರಾ ಮಹೇಶ್ ಜೂನ್ 3ರಂದು ಡಿಸಿ ಕಚೇರಿಯಲ್ಲಿ ಎಲ್ಲಾ ಸಂತ್ರಸ್ತರ ಸಭೆ ಕರೆಯುವ ಹಾಗೂ 15 ದಿನಗಳ ಒಳಗೆ ಕೊಡಗಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕರೆತಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದಾರೆ. .
ಒಟ್ಟಿನಲ್ಲಿ ಈಗಾಗಲೇ ಮಳೆ ಆರಂಬಾವಾಗಿದ್ದು, ಸರ್ಕಾರದ ಈ ಭರವಸೆ ಈಡೇರುತ್ತೋ ಇಲ್ಲವೋ ಅಂತ ಸಂತ್ರಸ್ತರು ಆತಂಕದಲ್ಲಿ ಇದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು‌. Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.