ETV Bharat / state

ಕೈಯಲ್ಲೇ ಕಿತ್ತು ಬರ್ತಿದೆ ಡಾಂಬರು..! ಕಳಪೆ ಕಾಮಗಾರಿ ವಿರುದ್ಧ ಜನರ ಆಕ್ರೋಶ - ETv Bharat Karnataka

ಕಲಬುರಗಿ ಜಿಲ್ಲೆಯ ಚೇಂಗಟಾ ಗ್ರಾಮದಿಂದ ದುತ್ತರಗಿ ಗ್ರಾಮದವರೆಗೆ ನಿರ್ಮಿಸಿದ್ದ ಡಾಂಬರು ರಸ್ತೆ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

Outrage of villagers against poor work
ಕಳಪೆ ಕಾಮಗಾರಿವಿರುದ್ದ ಗ್ರಾಮಸ್ಥರ ಆಕ್ರೋಶ
author img

By

Published : Nov 29, 2022, 8:27 AM IST

ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಐದು ದಿನಗಳ ಹಿಂದೆ ರಸ್ತೆಗೆ ಹಾಕಿದ್ದ ಡಾಂಬರು ಕಿತ್ತು ಬರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇಂಗಟಾ ಗ್ರಾಮದಿಂದ ದುತ್ತರಗಿ ಗ್ರಾಮದವರೆಗೆ ಜಿಲ್ಲಾ ಪಂಚಾಯತ್,​ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಎರಡು ಕಿಲೋ ಮೀಟರ್ ರಸ್ತೆ ನಿರ್ಮಿಸಿದೆ. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಬರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಮಗಾರಿ ಹೆಸರಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಕೋಟಿ ಕೋಟಿ ರೂ ಹಣ ನುಂಗಿ ನೀರು ಕುಡಿಯುತ್ತಿದ್ದಾರೆ. ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಾಲ್ಕು ತಿಂಗಳಲ್ಲೇ ಕಿತ್ತು ಹೋದ ಕೋಟ್ಯಂತರ ವೆಚ್ಚದ ರಸ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.