ETV Bharat / state

ಕೊಡಗಿನಲ್ಲಿ ಧಾರಾಕಾರ ಮಳೆ: ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ವೃದ್ಧ ಶವವಾಗಿ ಪತ್ತೆ

author img

By

Published : Jul 15, 2021, 1:54 PM IST

Updated : Jul 15, 2021, 2:13 PM IST

ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಹೊಳೆ ದಾಟುವ ವೇಳೆ ವೃದ್ಧರೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.

old man from kodagu washed away in rain water
ಮೊದಲ ಬಲಿ

ಕೊಡಗು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, 2021ರ ಮಹಾಮಳೆಗೆ ಕೊಡಗಿನಲ್ಲಿ ಮೊದಲ‌ ಬಲಿಯಾಗಿದೆ. ವಿಪರೀತ ಮಳೆ ಹಿನ್ನೆಲೆ ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ವೃದ್ಧ ಶವವಾಗಿ ಪತ್ತೆಯಾಗಿದ್ದಾರೆ.

ಮಡಿಕೇರಿ ತಾಲೂಕಿನ ಅವ್ವಂದೂರು ಗ್ರಾಮದಲ್ಲಿ ಘಟನೆ ನಡೆದಿದೆ. ತಾಲೂಕಿನ ಕಿರು ಹೊಳೆಯಲ್ಕಿಯ ಬೊಮ್ಮೇಗೌಡನ ಬಾಬಿ (70) ಎಂಬ ವಿಶೇಷ ಚೇತನ ವ್ಯಕ್ತಿ ಹೊಳೆಯಲ್ಲಿ ಕೊಚ್ಚಿಹೋಗಿದ್ದರು. ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆ ಕಿರು ಹೊಳೆ ತುಂಬಿ ಹರಿಯುತ್ತಿದ್ದು, ಹೊಳೆ ದಾಟುವಾಗ ಬಾಬಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಇಂದು ಅವರ ಮೃತದೇಹ ಪತ್ತೆಯಾಗಿದೆ.

ಇಂದು ಸ್ಥಳಕ್ಕಾಮಿಸಿದ ಅಗ್ನಿಶಾಮಕ ಸಿಬ್ಬಂದಿ ಶವ ಪತ್ತೆ ಮಾಡಿದ್ದಾರೆ.

Last Updated : Jul 15, 2021, 2:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.