ETV Bharat / state

ನಾಪೋಕ್ಲು-ಮೂರ್ನಾಡು ರಸ್ತೆ ಸಂಪೂರ್ಣ ಜಲಾವೃತ: ಸಂಚಾರ ಸ್ಥಗಿತ - ನಾಪೋಕ್ಲು ಮೂರ್ನಾಡು ರಸ್ತೆ ಜಲಾವೃತ

ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.

Napoklu Murnad road completely flooded in Kodagu
ನಾಪೋಕ್ಲು-ಮೂರ್ನಾಡು ರಸ್ತೆ ಸಂಪೂರ್ಣ ಜಲಾವೃತ
author img

By

Published : Jul 17, 2022, 9:19 AM IST

ಕೊಡಗು: ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಕಾವೇರಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ನಾಪೋಕ್ಲು ಪಟ್ಟಣಕ್ಕೆ ತೆರಳುವ ಎಲ್ಲಾ ರಸ್ತೆಗಳು ನೀರಿನಿಂದ ಆವೃತಗೊಂದಿದ್ದು, ಪಟ್ಟಣ ದ್ವೀಪವಾಗುವ ಸಾಧ್ಯತೆಯಿದೆ.

ಈಗಾಗಲೇ ನಾಪೋಕ್ಲು ಬೆಟ್ಟಗೇರಿ ಮಡಿಕೇರಿ ಸಂಪರ್ಕ ಕಲ್ಪಿಸುವ ರಸ್ತೆ, ಕೊಟ್ಟಮುಡಿ ಜಂಕ್ಷನ್ ಬಳಿಯ ಕಾಫಿ ತೋಟಗಳಿಗೆ ಕಾವೇರಿ ನೀರಿನ ಪ್ರವಾಹ ತಲುಪಿದೆ. ಕೇವಲ 5 ರಿಂದ 6 ಅಡಿಗಳಷ್ಟು ನೀರು ಏರಿಕೆಯಾದರೆ ಸಂಪೂರ್ಣ ರಸ್ತೆ ಜಲಾವೃತಗೊಂಡು ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನಿರಂತರ ಮಳೆಯಿಂದ ವ್ಯಾಪ್ತಿಯಲ್ಲಿ ಪ್ರವಾಹದ ಲಕ್ಷಣಗಳು ಹೆಚ್ಚಾಗಿದ್ದು, ನದಿ ದಡದಲ್ಲಿ ವಾಸಿಸುವ ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ನಾಪೋಕ್ಲು-ಮೂರ್ನಾಡು ರಸ್ತೆ ಸಂಪೂರ್ಣ ಜಲಾವೃತ

ಸಮೀಪದ ಚೆರಿಯಪರಂಬು, ಕಾವೇರಿ ನದಿ ದಡದ ಪೈಸಾರಿಯಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿದ್ದು, ಆತಂಕದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪ್ರವಾಹ ಬರುವ ಸ್ಥಳವಾದ್ದರಿಂದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ನೋಟಿಸ್ ನೀಡಿ, ಪ್ರವಾಹ ಬರುವ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

ಅದರಂತೆ ಹಲವಾರು ಕುಟುಂಬಗಳು ಸ್ಥಳಾಂತರವಾಗಿದ್ದು, ಇನ್ನೂ ಕೆಲವರು ಅಲ್ಲಿಯೇ ಉಳಿದಿದ್ದಾರೆ. ನಾಪೋಕ್ಲು ವ್ಯಾಪ್ತಿಯ ಎಲ್ಲಾ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಕಕ್ಕಬ್ಬೆ, ಎಮ್ಮೆಮಾಡು, ಹೊದವಾಡ, ಕೋಕೇರಿ, ಪಾರಾಣೆ, ಕೈಕಾಡು ವ್ಯಾಪ್ತಿಯ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

Rain related incident in kodagu
ಮಳೆಯಿಂದ ಕುಸಿದು ಬಿದ್ದ ಮನೆ

ಮನೆ ಕುಸಿತ: ಕುಶಾಲನಗರ ತಾಲೂಕಿನ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೌರಮ್ಮ ಮತ್ತು ಶಿವಣ್ಣ ಎಂಬವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿಯೇ ಇದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಅಯ್ಯಪ್ಪ ಬೆಟ್ಟದಲ್ಲಿ ಬಿರುಕು: 80 ಕುಟುಂಬಗಳ 221 ಜನರ ಸ್ಥಳಾಂತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.