ಕೊಡಗು: ಸ್ವಾತಂತ್ರ್ಯ ಬಂದು 75 ವರ್ಷವಾದರೂ, ಬುಡಕಟ್ಟು ಜನಾಂಗದವರಿಗೆ ಇನ್ನೂ ಮೂಲ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮುಳ್ಳುರು ಗ್ರಾಮದಲ್ಲಿ 50ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಆದ್ರೆ ಇದುವರೆಗೆ ಅವರಿಗೆ ಯಾವುದೇ ಮೂಲ ಸೌಲಭ್ಯಗಳು ದೊರೆತಿಲ್ಲ.
ಟಾರ್ಪಲ್ ಹಾಕಿರುವ ಗುಡಿಸಲು, ಕುಡಿಯಲು ಹಳದಿ ಬಣ್ಣದ ನೀರು, ಹುಳಗಳ ಜೊತೆ ಕತ್ತಲಿನಲ್ಲಿ ಜೀವನವನ್ನು ಇವರು ಕಳೆಯುತ್ತಿದ್ದಾರೆ. ಇವರಿಗೆ ಪಡಿತರ ಅಕ್ಕಿ, ಆಧಾರ್ ಕಾರ್ಡ್ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಸರ್ಕಾರದಿಂದ ಅಕ್ಕಿ, ಬೇಳೆ ಕೊಡುತ್ತಾರಂತೆ, ಅದು ಕೂಡ 6 ತಿಂಗಳಿಗೆ ಒಂದು ಸಾರಿ. ಅಧಿಕಾರಿಗಳು ಬರುತ್ತೇವೆ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರಂತೆ, ಆದರೆ ಯಾರು ಬಂದಿಲ್ಲ.
ಇಲ್ಲಿಗೆ ಭೇಟಿ ನೀಡಿದ ವಿರಾಜಪೇಟೆ ಜೆಡಿಎಸ್ ಮುಂಖಡ ಮಂಜು ಇವರ ಕಷ್ಟಗಳನ್ನು ಆಲಿಸಿದ್ರು. ಅಲ್ಲದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 700 ಕ್ಕೂ ಹೆಚ್ಚು ಮನೆ ಕೊಟ್ಟಿದ್ರು. ಈ ನಿರಾಶ್ರಿತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಅಲ್ಲದೇ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮೂಲ ಸೌಲಭ್ಯಗಳಿಂದ ಈ ಗ್ರಾಮ ದೂರ: ಗ್ರಾಮದತ್ತ ಮುಖ ಮಾಡದ ಜನಪ್ರತಿನಿಧಿಗಳು