ETV Bharat / state

ಕೊಡಗು: ಮತ್ತೆ ಕಾಂಗ್ರೆಸ್ ಗೂಡು ಸೇರುವ ಮುನ್ಸೂಚನೆ ನೀಡಿದರು ಎಂಎಲ್​ಸಿ ವಿಶ್ವನಾಥ್​ - MLC Vishwanath

ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆ. ಹಾಗೆಯೇ ಆಗುತ್ತದೆ ಎಂಬ ನಿರ್ಣಯ ಇಲ್ಲ ಎಂದು ಬಿಜೆಪಿ ಎಂಎಲ್​ಸಿ ವಿಶ್ವನಾಥ್ ಅವರು ಹೇಳಿದ್ದಾರೆ.

ಎಂಎಲ್​ಸಿ ವಿಶ್ವನಾಥ್​
ಎಂಎಲ್​ಸಿ ವಿಶ್ವನಾಥ್​
author img

By

Published : Sep 2, 2022, 6:01 PM IST

ಕೊಡಗು: ಬಿಜೆಪಿ ಎಂಎಲ್​ಸಿ ವಿಶ್ವನಾಥ್ ಪಕ್ಷ ಬಿಡುವ ಬಗ್ಗೆ ಸೂಚನೆ ನೀಡಿದ್ದಾರೆ. ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ಬಗ್ಗೆ ತೆರೆಮರೆಯಲ್ಲಿ ಕಸರತ್ತು ರೂಪಿಸುತ್ತಿದ್ದಾರೆ ಎಂದು ಮಡಿಕೇರಿಯಲ್ಲಿ ಮಾತನಾಡುವಾಗ ಮುನ್ಸೂಚನೆ ಕೊಟ್ಟಂತೆ ಕಾಣುತ್ತಿದೆ. ಝಂಡಾ.. ಅಜೆಂಡಾದ ಮಾತಲ್ಲಿ ಅಡಗಿದೆಯಾ ಕೈ ಸೇರ್ಪಡೆಯ ಸುಳಿವು ಎಂಬುದು ಅವರ ಮಾತಿನಲ್ಲಿ ತಿಳಿಯುತ್ತಿದೆ.

ಬಿಜೆಪಿ ಎಂಎಲ್​ಸಿ ವಿಶ್ವನಾಥ್ ಅವರು ಮಾತನಾಡಿರುವುದು

ನನ್ನ ಅಜೆಂಡಾ ಬದಲಾಗುವುದಿಲ್ಲ: ತಾಲೂಕಿನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, 'ನಾನು ಡಿಕೆ ಶಿವಕುಮಾರ್ ಬಹಳ ಹಳೆಯ ಸ್ನೇಹಿತರು. ನಾನು ಬಹಳ ವರ್ಷದ ಹಿಂದಿನಿಂದಲೂ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೇವೆ. ಹೀಗಾಗಿ, ಹುಣಸೂರಿನಲ್ಲಿ ಕೆಂಪೇಗೌಡ ಆಚರಣೆಗೆ ಹೋಗುವ ಸಂದರ್ಭದಲ್ಲಿ ನಮ್ಮ ಶಾಸಕರು ಹುಣಸೂರಿನವರು. ಅವರ ಮನೆಗೆ ಊಟಕ್ಕೆ ಕರೆದಿದ್ದರು. ನಾವೆಲ್ಲರೂ ಹೋಗಿದ್ದೆವು. ಅದರಲ್ಲಿ ವಿಶೇಷ ಏನಿಲ್ಲ. ನೋಡಿ ಸರ್ ನಾನು ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಎಲ್ಲಿಗೆ ಹೋದರೂ ನನ್ನ ಝಂಡಾ ಬದಲಾಗುತ್ತೆ ಹೊರತು, ನನ್ನ ಅಜೆಂಡಾ ಬದಲಾಗುವುದಿಲ್ಲ' ಎಂದರು.

ನಾವು ಸ್ವಾತಂತ್ರ್ಯವನ್ನು ಹೊಂದಿದ್ದೇವೆ: 'ನನ್ನ ಅಜೆಂಡಾ ಈ ದೇಶದ ಜನರು, ಅವರ ಕಾರ್ಯಕ್ರಮ, ಜಾತ್ಯತೀತವಾಗಿ ಜನಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಜೊತೆಗೆ ಕೆಲಸ ಮಾಡುವುದು. ಅದು ನನ್ನ ಅಜೆಂಡಾ. ಕೆಲಸ ಮಾಡುವುದು ಮುಖ್ಯ. ಜನತಂತ್ರ ವ್ಯವಸ್ಥೆಯಲ್ಲಿ ನಾವು ಸ್ವಾತಂತ್ರ್ಯ ಹೊಂದಿದ್ದೇವೆ. ನಾವು ಎಲ್ಲಿಗೆ ಬೇಕಾದರೂ ಹೋಗಬಹುದು, ಎಲ್ಲಿಗೆ ಬೇಕಾದರೂ ಬರಬಹುದು' ಎಂದು ಹೇಳಿದರು.

ಒತ್ತಾಯ ಬಂದ್ರೆ ಹೋಗುತ್ತೇವೆ: ರಾಜಕೀಯದಲ್ಲಿ ನಿಮ್ಮ ಮುಂದಿನ ನಡೆ ಏನು? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಗೊತ್ತು ಸಂಜೆ ಮಳೆ ಬರಬಹುದಾ ಇಲ್ಲವಾ ಎಂದು. ಹಾಗಾಗಿ, ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆ. ಹಾಗೆಯೇ ಆಗುತ್ತದೆ ಎಂಬ ನಿರ್ಣಯ ಇಲ್ಲ. ಇವತ್ತು ರಾಜಕಾರಣ ಹೇಗಾಗಿದೆ ಅಂದರೆ, ನಾವು ವೋಟಿಗಾಗಿ ಏನ್ ಬೇಕಾದರೂ ಮಾಡಬಹುದು ಎಂಬಂತಾಗಿದೆ. ಹೋಗಬೇಕಾದ ಒತ್ತಾಯ ಬಂದ್ರೆ ಹೋಗುತ್ತೇವೆ. ಅದಕ್ಕೇನು? ಎಂದು ಹೇಳಿದರು.

ಓದಿ: ಸಾರಿಗೆ ನೌಕರರ ಆತ್ಮಹತ್ಯೆ: ಶ್ರೀರಾಮುಲು ರಾಜೀನಾಮೆಗೆ ಆಮ್‌ ಆದ್ಮಿ ಒತ್ತಾಯ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.